ಯಶ್ ಹೊಸ ಚಿತ್ರ ಟಾಕ್ಸಿಕ್.. ತೆರೆಗೆ ಬರಲು ಒಂದೂವರೆ ವರ್ಷ

162

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಅವರ ಮುಂದಿನ ಚಿತ್ರ ಯಾವುದು ಅನ್ನೋದಕ್ಕೆ ಉತ್ತರ ಸಿಕ್ಕಿದೆ. ಶುಕ್ರವಾರ ಮುಂಜಾನೆ ಹೊಸ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಯಶ್ ನಟನೆಯ 19ನೇ ಚಿತ್ರದ ಹೆಸರು ಟಾಕ್ಸಿಕ್ ಆಗಿದೆ.

ಗೀತು ಮೋಹನದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ, ಈ ಸಿನಿಮಾ ನೋಡಲು ಅಭಿಮಾನಿಗಳು ಒಂದೂವರೆ ವರ್ಷ ಕಾಯಬೇಕು. ಯಾಕಂದರೆ ಈ ಸಿನಿಮಾ ಏಪ್ರಿಲ್ 10, 2025ಕ್ಕೆ ಬಿಡುಗಡೆಯಾಗಲಿದೆ.

ಕೆವಿಎನ್ ಪ್ರೊಡೆಕ್ಷನ್ ಅಡಿಯಲ್ಲಿ ಮೊನಸ್ಟಾರ್ ಮೈಂಡ್ ಕ್ರಿಯೇಷನ್ ಮೂಲಕ ಟಾಕ್ಸಿಕ್ ಸಿನಿಮಾ ಸಿದ್ಧವಾಗುತ್ತಿದೆ. ವೆಂಕಟ್ ನಾರಾಯಣ್ ಹಾಗೂ ಯಶ್ ಬಂಡವಾಳ ಹಾಕುತ್ತಿದ್ದಾರೆ. ಟಾಕ್ಸಿಕ್ ಅನ್ನೋದನ್ನು ಕನ್ನಡಕ್ಕೆ ಅನುವಾದ ಮಾಡಿದರೆ ನಂಜು, ವಿಷಕಾರಕ ಎನ್ನುವ ಅರ್ಥ ಬರುತ್ತೆ. ಯಾವ ಕಾರಣಕ್ಕೆ ಈ ರೀತಿಯ ಟೈಟಲ್ ಇಡಲಾಗಿದೆ ಎನ್ನುವುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ.

ಕೆಜಿಎಫ್-2 ಬಿಡುಗಡೆಯಾಗಿಯೇ ಒಂದೂವರೆ ವರ್ಷ ಮೇಲಾಗಿದೆ. ಹೀಗಿರುವಾಗ ಹೊಸ ಚಿತ್ರಕ್ಕೂ ಅಭಿಮಾನಿಗಳು ಒಂದೂವರೆ ವರ್ಷ ಕಾಯಬೇಕು ಅಂದರೆ ಯಶ್ 19ನೇ ಚಿತ್ರ ತೆರೆಗೆ ಬರಲು 3 ವರ್ಷ ತೆಗೆದುಕೊಂಡಂತೆ ಆಗಲಿದೆ. ಇಷ್ಟೊಂದು ಗ್ಯಾಪ್ ಫ್ಯಾನ್ಸ್ ಕುತೂಹಲ ಎಷ್ಟು ಹೆಚ್ಚಿಸುತ್ತೆ ಅನ್ನೋದು ಕಾದು ನೋಡಬೇಕಿದೆ.


TAG


Leave a Reply

Your email address will not be published. Required fields are marked *

error: Content is protected !!