ಟಾಕ್ಸಿಕ್ ನಲ್ಲಿ ಶಾರುಖ್ ಬಗ್ಗೆ ಯಶ್ ಹೇಳಿದ್ದೇನು?

141

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಕರಿಯರ್ ಕಂಪ್ಲೀಟ್ ಚೇಂಜ್ ಆಗಿದೆ. ಹೀಗಾಗಿ ಅವರ ಹೊಸ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಆದರೆ, ಆ ಚಿತ್ರ ಬರುವುದು 2025ಕ್ಕೆ ಅನ್ನೋದು ಅಭಿಮಾನಿಗಳಿಗೆ ಬೇಸರದ ಸಂಗತಿ. ಇದರ ನಡುವೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಾರೆ ಅನ್ನೋ ಮಾತುಗಳು ಜೋರಾಗಿವೆ.

ಈ ಬಗ್ಗೆ ಮಾತನಾಡಿರುವ ಯಶ್, ಟಾಕ್ಸಿಕ್ ಚಿತ್ರದಲ್ಲಿ ಶಾರುಖ್ ಖಾನ್ ನಟನೆ ಎನ್ನುವುದು ಎಲ್ಲವೂ ಊಹಾಪೋಹ. ಮುಂದಿನ ದಿನಗಳಲ್ಲಿ ಪಾತ್ರಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ ಎಂದಿದ್ದಾರೆ. ಇನ್ನು ಜೈ ಹನುಮಾನ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಕೇಳಲಾಯಿತು. ಇಲ್ಲ ನಾನು ನಟಿಸುತ್ತಲ್ಲ ಎಂದು ಹೇಳಿದರು.

ಸೆಲಿಬ್ರಿಟಿ ಫಿಟ್ನೆಸ್ ಟ್ರೇನರ್ ಆಗಿರುವ ಪಾನಿಪುರಿ ಕಿಟ್ಟಿ ಅವರ ಹೊಸ ಜಿಮ್ ಉದ್ಘಾಟನೆ ವೇಳೆ ಯಶ್, ನೆನಪಿರಲಿ ಪ್ರೇಮ, ಅಜಯ್ ರಾವ್ ಸೇರಿ ಇತರರು ಭಾಗವಹಿಸಿದ್ದರು. ಈ ವೇಳೆ ಯಶ್ ಮಾತನಾಡಿ ಈ ಎಲ್ಲ ವಿಚಾರಗಳನ್ನು ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!