ಗುಮ್ಮಟನಗರಿಯಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರ್ಭಟ

249

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಗುಮ್ಮಟನಗರಿಯಲ್ಲಿ ಬೆಳ್ಳಂಬೆಳಗ್ಗೆ ಭರ್ಜರಿ ಮಳೆಯಾಗುತ್ತಿದೆ. ಬೆಳಗಿನ ಜಾವದಿಂದಲೇ ಶುರುವಾದ ಮಳೆ ಸತತ ನಾಲ್ಕು ಗಂಟೆಯಿಂದ ಸುರಿಯುತ್ತಲೇ ಇದೆ.

ವಿಜಯಪುರ, ಇಂಡಿ, ದೇವರಹಿಪ್ಪರಗಿ, ಸಿಂದಗಿ, ಆಲಮೇಲ, ಕಲಕೇರಿ, ಬಸವನಬಾಗೇವಾಡಿ ಸೇರಿದಂತೆ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ಇದ್ರಿಂದಾಗಿ ಕೆಲಸಕ್ಕೆ ಹೋಗುವವರಿಗೆ ಸಾಕಷ್ಟು ತೊಂದರೆಯಾಗಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳಿಗೂ ಇದ್ರಿಂದ ಹೈರಾಣಾಗುತ್ತಿದೆ.

ಇನ್ನು ಸತತ ಮಳೆಯಿಂದ ಹಲವು ಪ್ರದೇಶದಲ್ಲಿ ನೀರು ಹರಿಯುತ್ತಿದೆ. ಸಣ್ಣಪುಟ್ಟ ಏರಿಯಾಗಳಲ್ಲಿ ಕೆಸರುಮಯವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!