7ನೇ ಬಾರಿಗೆ ಬಿಹಾರ ಚುಕ್ಕಾಣಿ ಹಿಡಿದ ನಿತೀಶಕುಮಾರ

266

ಪ್ರಜಾಸ್ತ್ರ ಸುದ್ದಿ

ಪಾಟ್ನಾ: ಬಿಹಾರದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಜೆಡಿಯು ನಾಯಕ ನಿತೀಶಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸತತ 4ನೇ ಅವಧಿಗೆ ಸಿಎಂ ಆದ ನಿತೀಶಕುಮಾರ, 7ನೇ ಬಾರಿಗೆ ಈ ಹುದ್ದೆಯನ್ನ ಅಲಂಕರಿಸಿದ್ದಾರೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸಹದ್ಯೋಗಿಗಳ ಜೊತೆ ಪದಗ್ರಹಣ ನಡೆಯಿತು. ರಾಜ್ಯಪಾಲ ಫಗು ಚೌಹಾಣ ಪ್ರಮಾಣ ವಚನ ಬೋಧಿಸಿದ್ರು. ತಾರ್ ಕಿಶೋರ ಹಾಗೂ ರೇಣುದೇವಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ರು.

ಈ ವೇಳೆ ಕೇಂದ್ರ ಸಚಿವ ಅಮಿತ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!