ಸಂವಿಧಾನ ತುಂಡು ಮಾಡಲು ಬಿಜೆಪಿ ಪ್ರಯತ್ನ: ರಾಹುಲ್ ಗಾಂಧಿ

69

ಪ್ರಜಾಸ್ತ್ರ ಸುದ್ದಿ

ಭಾಗಲ್ ಪುರ: ಬಿಹಾರದ ಭಾಗಲ್ ಪುರದಲ್ಲಿ ಮೊದಲ ಬಾರಿಗೆ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಸಂವಿಧಾನ ತುಂಡು ಮಾಡಲು ಬಿಜೆಪಿ ಪಯತ್ನಿಸುತ್ತಿದೆ. ಆದರೆ, ಅದಕ್ಕೆ ಇಂಡಿಯಾ ಮೈತ್ರಿಕೂಟ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ಬಿಜೆಪಿ ಹೇಳುತ್ತಿದೆ 370 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು. ಆದರೆ, ಅವರು 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಳಿಸುವುದಿಲ್ಲ. ಬಿಜೆಪಿ-ಆರ್ ಎಸ್ಎಸ್ ಜೊತೆಗೆ ಸಂವಿಧಾನ ಚೂರು ಮಾಡಲು ಪ್ರಯತ್ನಿಸುತ್ತಿವೆ. ಆದರೆ, ಇಂಡಿಯಾ ಮೈತ್ರಿಕೂಟ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಹೋರಾಟ ನಡೆಸುತ್ತಿದೆ. ಬಡವರು, ದಲಿತರು, ಆದಿವಾಸಿಗಳು ಏನನ್ನು ಪಡೆಯುತ್ತಿದ್ದಾರೆ ಅದು ಸಂವಿಧಾನದಿಂದ. ಒಂದು ವೇಳೆ ಸಂವಿಧಾನ ಚೂರಾದರೆ ಎಲ್ಲವೂ ಅಂತ್ಯವಾಗುತ್ತೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಿಧಾನ ತಿದ್ದುಪಡಿ ಮಾಡಲು ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಬಿಜೆಪಿ ಅಂತಿಮ ಗುರಿ ಸಹ ಇದೆಯಾಗಿದೆ. ಇನ್ನು ಮೋದಿ ಸರ್ಕಾರ ಸೂಪರ್ ಶ್ರೀಮಂತರ ಪರವಾಗಿದೆ. ಅವರ ಆಡಳಿತದಲ್ಲಿ 22 ಜನರು ದೇಶದ ಶೇಕಡ 70ರಷ್ಟು ಜನರ ಸಂಪತ್ತುನ್ನು ಹೊಂದಿದ್ದಾರೆ. ನಾವು ಇದನ್ನು ಬದಲಾಯಿಸಲು ಬರುತ್ತೇವೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.




Leave a Reply

Your email address will not be published. Required fields are marked *

error: Content is protected !!