ಸುಂದರ ಮೈಕಾಂತಿಗೆ ಮನೆಮದ್ದು ಟಿಪ್ಸ್

424

ತ್ವಚೆ ಸೌಂದರ್ಯದ ಗುಟ್ಟು ಹೇಳುತ್ತೆ ಅನ್ನೋ ಮಾತಿದೆ. ಹೀಗಾಗಿ ಪ್ರತಿಯೊಬ್ಬರು ಮೃದು ಮತ್ತು ಹೊಳಪಿನಿಂದ ಕೂಡಿದ ಮುಖಕಾಂತಿ ಹೊಂದಲು ಇಷ್ಟಪಡ್ತಾರೆ. ಬರೀ ಮುಖದ ಕಾಂತಿಗೆ ಹಾತೊರೆಯುವ ಮಂದಿ ಮೈಕಾಂತಿ ಬಗ್ಗೆ ಗಮನ ಹರಿಸುವುದಿಲ್ಲ. ಅದಕ್ಕೆ ನಾವು ನಿಮ್ಗೆ ಒಂದಿಷ್ಟು ಟಿಪ್ಸ್ ನೀಡ್ತಿದ್ದೇವೆ. ಸ್ನಾನದ ನೀರಿನಲ್ಲಿ ನೈಸರ್ಗಿಕ ಮನೆಮದ್ದುಮಗಳನ್ನ ಬಳಸಿ, ಕೆಲವೇ ದಿನಗಳಲ್ಲಿ ದೇಹದ ಕಾಂತಿಯನ್ನ ಹೆಚ್ಚಿಸಿಕೊಳ್ಳಬಹುದು.

ಮೈಕಾಂತಿ ಹೆಚ್ಚಿಸಲು ಸ್ನಾನದ ನೀರಿನಲ್ಲಿ ಬಳಸಬಹುದಾದ ಮನೆಮದ್ದುಗಳು ಯಾವುದು, ಯಾವ ಮನೆಮದ್ದು ಎಂತಹ ಅಂಶಗಳನ್ನು ಹೊಂದಿದೆವ ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಉಪ್ಪು:

ಉಪ್ಪಿನಲ್ಲಿ ಗ್ಯಾಸ್ಟ್ರೋನೊಮಿಕ್ ಅಂಶವಿರುವುದರಿಂದ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನವಿದೆ. ಸ್ನಾನ ಮಾಡುವ ನೀರಿನಲ್ಲಿ ಕಪ್ಪು ಉಪ್ಪು ಬೆರೆಸುವುದರಿಂದ ತ್ವಚೆಯ ತುರಿಕೆ, ಉರಿಯೂತ, ಉಳುಕು, ಸನ್ ಬರ್ನ್ ಮತ್ತು ಮಾನಸಿಕ ಒತ್ತಡ ಸೇರಿದಂತೆ ಸೂಕ್ಷ್ಮ ತ್ವಚೆಯ ಸಮಸ್ಯೆಗಳನ್ನ ನಿವಾರಿಸಿಕೊಳ್ಳಬಹುದು.

ದೇಹದ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುವ ಉಪ್ಪುನೀರಿನ ಸ್ನಾನ, ಒಣ ತ್ವಚೆಯನ್ನು ಮೃದುವಾಗಿಸುತ್ತದೆ. ಸೋರಿಯಾಸಿಸ್ ಸಮಸ್ಯೆಗೂ ಉಪ್ಪು ನೀರು ಮದ್ದಾಗಿದೆ.

A bottle of apple cider vinegar in the morning sun, with apples in the background

ವಿನಿಗರ್:

ತ್ವಚೆಯ ಪಿಹೆಚ್ ಪ್ರಮಾಣ ಸಮತೋಲನದಲ್ಲಿರುವ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಬೆನ್ನು ನೋವು, ಮಂಡಿ ನೋವು, ಮಣಿಕಟ್ಟಿನ ನೋವುಗಳನ್ನ ನಿವಾರಿಸುತ್ತದೆ. ಅಲ್ಲದೇ ಇದರಲ್ಲಿರುವ ಅಲ್ಫಾ ಹೈಡ್ರಾಕ್ಸಿ ಆಸಿಡ್ ತ್ವಚೆಯ ಅಂದ ಹೆಚ್ಚಿಸುವುದಲ್ಲದೆ, ತ್ವಚೆಯಲ್ಲಿ ಮೊಡವೆಗಳು ಬರದಂತೆ ತಡೆಯುತ್ತದೆ.

ಜೇನು:

ಜೇನು ತಿನ್ನುವುದು ಅಂದ್ರೆ ಎಲ್ಲರಿಗೂ ಇಷ್ಟ. ಅದರ ರುಚಿಗೆ ಮರುಳಾಗದವರೆ ಇಲ್ಲ. ಇಂಥಾ ಜೇನು ನಮ್ಮ ಆರೋಗ್ಯದ ಜೊತೆಗೆ ತ್ವಚೆಯನ್ನ ಮೃದುವಾಗಿಡುತ್ತೆ. ಎಣ್ಣೆಯುಕ್ತ ತ್ವಚೆ ನಿವಾರಣೆಗೆ ಜೇನು ಸಹಕಾರಿ. ಚರ್ಮದ ಪುನರುತ್ಪಾದನೆ ಹಾಗೂ ತೇವಾಂಶವನ್ನ ಕಾಯ್ದುಕೊಳ್ಳುವಂತೆ ಮಾಡುತ್ತದೆ. ಅರ್ಧ ಬಟ್ಟಲು ಜೇನನ್ನ ನೀರಿನಲ್ಲಿ ಬೆರೆಸಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತ್ವಚೆಯ ಕಾಂತಿಯನ್ನ ಹೆಚ್ಚಿಸುತ್ತದೆ.

ಓಟ್ ಮೀಲ್:

ಚರ್ಮ ಹೊಳಪು ತರಬಲ್ಲ ಗುಣವನ್ನ ಓಟ್ ಮೀಲ್ ಹೊಂದಿದೆ. ಸನ್ ಬರ್ನ್ ನಿಂದಾಗಿ ಚರ್ಮ ಕಪ್ಪಾಗಿರುವುದನ್ನು ತಡೆಯಲು, ಚರ್ಮದ ಉರಿಯೂತದ ಸಮಸ್ಯೆಯನ್ನು ಓಟ್ ಮೀಲ್ ನಿವಾರಿಸಬಲ್ಲದ್ದು. ಸ್ನಾನದ ನೀರಿಗೆ ಅರ್ಧ ಅಥವಾ ಒಂದು ಕಪ್ ಓಟ್ ಮೀಲ್ ಹಾಕಿ ಕೊಂಚ ಸಮಯದ ನಂತರ ಸ್ನಾನ ಮಾಡಿ.

ಕೊಬ್ಬರಿ ಎಣ್ಣೆ:

ಕೊಬ್ಬರಿ ಅಥವಾ ಬಾದಾಮಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗಲಿದೆ. ಸ್ನಾನದ ನಂತರ ಮ್ಯಾಶ್ಚಿರೈಸರ್ ಕ್ರೀಮುಗಳನ್ನ ಬಳಸುವ ಅವಶ್ಯಕತೆಯಿಲ್ಲ. ಚರ್ಮದ ಶುಷ್ಕತೆಯನ್ನು ಹೋಲಾಡಿಸುವ ಜೊತೆಗೆ, ಕಪ್ಪುಗಳನ್ನ ನಿವಾರಿಸುವಲ್ಲಿ ಕೊಬ್ಬರಿ ಎಣ್ಣೆ ಮುಖ್ಯವಾಗಿದೆ.

ಅಡುಗೆ ಸೋಡಾ:

ಅಡುಗೆ ಸೋಡಾವನ್ನ ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳನ್ನ ಆಳದವರೆಗೆ ಸ್ವಚ್ಛಗೊಳಿಸುತ್ತದೆ. ಆಂಟಿ ಇನ್ಫ್ಲಾಮೇಟರಿ ಆಂಶಗಳನ್ನ ಒಳಗೊಂಡಿರುವ ಸೋಡಾ ಮೊಡವೆ ಕಲೆ, ದದ್ದುಗಳನ್ನು ನಿವಾರಿಸುತ್ತದೆ. ಮೃತಕೋಶಗಳನ್ನು ಸಹ ಶಮನಗೊಳಿಸುವಲ್ಲಿ ಪ್ರಾಮುಖ್ಯತೆವಹಿಸಿದೆ. ಇಷ್ಟೆಲ್ಲ ಮನೆ ಮದ್ದುಗಳು ಇರುವಾಗ ಟೆನ್ಷನ್ ಯಾಕೆ. ನಿತ್ಯ ಸ್ನಾನದಲ್ಲಿ ಇವುಗಳನ್ನ ಬಳಿಸಿ ಸುಂದರ ಮೈಕಾಂತಿ ಹೊಂದಿ.




Leave a Reply

Your email address will not be published. Required fields are marked *

error: Content is protected !!