ಶಾಲಾ, ಕಾಲೇಜು ಪ್ರಾರಂಭ: ಮಾರ್ಗಸೂಚಿ ಪ್ರಕಟ

298

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಆಗಸ್ಟ್ 23ರಿಂದ 9ನೇ ತರಗತಿಯಿಂದ 12ನೇ ತರಗತಿವರೆಗೂ ಕ್ಲಾಸ್ ಪ್ರಾರಂಭವಾಗಲಿವೆ. ಈ ಸಂಬಂಧ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೋಮವಾರದಿಂದ ಶುಕ್ರವಾರದವರೆಗೂ 10 ಗಂಟೆಯಿಂದ 1.30ರ ತನಕ, ಶನಿವಾರ 10ರಿಂದ 12.30ರ ವರೆಗೆ ತರಗತಿಗಳು ನಡೆಸಬೇಕು.

ಮಕ್ಕಳನ್ನ ಶಾಲೆಗೆ ಕಳುಹಿಸಲು ಪೋಷಕರ ಅನುಮತಿ ಕಡ್ಡಾಯ. ವಿದ್ಯಾರ್ಥಿಗಳ ಕರೋನಾ ನೆಗಟಿವ್ ವರದಿ ಕಡ್ಡಾಯ. ಶಾಲೆಯಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಮಾಸ್ಕ್ ಹಾಕಬೇಕು. ಒಂದು ಕ್ಲಾಸ್ ನಲ್ಲಿ 15-20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಭೌತಿಕವಾಗಿ ಶಾಲೆಗೆ ಬರಲು ಆಗದಿದ್ರೆ ಆನ್ಲೈನ್ ಮೂಲಕ ಕ್ಲಾಸ್ ಕೇಳಬಹುದು.

ಇನ್ನು ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರು ವ್ಯವಸ್ಥೆ ಮಾಡಬೇಕು. ಮಕ್ಕಳು ಮನೆಯಿಂದಲೇ ಊಟ, ನೀರು ತೆಗೆದುಕೊಂಡು ಬರಬೇಕು. ಹೀಗೆ ಹಲವು ಮಾರ್ಗಸೂಚಿಗಳನ್ನ ಪ್ರಕಟಿಸಲಾಗಿದ್ದು, ಶಾಲಾ ಸಿಬ್ಬಂದಿ ಇವುಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎನ್ನಲಾಗಿದೆ.




Leave a Reply

Your email address will not be published. Required fields are marked *

error: Content is protected !!