ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಪಟ್ಟಣದ ಶಾಂಭವಿ ಡಾಬಾ ಹತ್ತಿರದ ಜಮೀನೊಂದರಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯ ಹೆಸರು ಪರಶುರಾಮ ಶಿವಪ್ಪ ಬಡಿಗೇರ ಎನ್ನಲಾಗ್ತಿದೆ.
ಮೃತ ಪರಶುರಾಮ ಮನೆಯಲ್ಲಿ ಗಲಾಟೆ ಮಾಡಿಕೊಂಡು ನಿನ್ನೆ ಮನೆಬಿಟ್ಟು ಬಂದಿದ್ದನಂತೆ. ಹೀಗೆ ಬಂದವನು ಸೋಮವಾರ ಹೆಣವಾಗಿ ಪತ್ತೆಯಾಗಿದ್ದಾನೆ. ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.