ಶತಕ ಸಿಡಿಸಿದ ಶರ್ಮಾ, ಗಿಲ್

143

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ 218 ರನ್ ಗಳಿಗೆ ಮೊದಲ ದಿನವೇ ಆಲೌಟ್ ಆಗಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು ಆರಂಭಿಕ ಆಟಗಾರರು ಉತ್ತಮ ಬುನಾದಿ ಹಾಕಿದ್ದಾರೆ.

ನಾಯಕ ರೋಹಿತ್ ಶರ್ಮಾ 103, ಶುಭನಂ ಗಿಲ್ 110 ರನ್ ಗಳಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ 12ನೇ ಶತಕ, ಗಿಲ್ 4ನೇ ಶತಕ ದಾಖಲಿಸಿದರು. ನಿನ್ನ ಭಾರತ 30 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತ್ತು. ಜೈಸ್ವಾಲ್ 57 ರನ್ ಗೆ ಔಟ್ ಆಗಿದ್ದ. ಈಗ 3 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ. ದೇವದತ್ ಪಡಿಕಲ್ 34, ಶರ್ಫರಾಜ್ ಖಾನ್ 7 ರನ್ ಗಳೊಂದಿಗೆ ಆಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!