ಕಿರುತೆರೆ ನಟಿ, ಆಕೆ ಸಹೋದರಿ ನಿಧನ

84

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಿಂದಿ ಕಿರುತೆರೆಯ ಖ್ಯಾತ ನಟಿ ಡಾಲಿ ಸೋಹಿ(48) ನಿಧನರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಡಾಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ನಿನ್ನೆ ರಾತ್ರಿಯಷ್ಟೇ ಸಹೋದರಿ ಅಮನದೀಪ್ ಸೋಹಿ ನಿಧನರಾಗಿದ್ದಾರೆ. ಈಗ ನೋಡಿದರೆ ನಟಿ ಡಾಲಿ ನಿಧನ ಎಲ್ಲರಿಗೂ ಶಾಕ್ ನೀಡಿದೆ.

ಡಾಲಿ ಸಹೋದರಿ ಅಮನದೀಪ್ ಕಾಮಾಲೆ ರೋಗದಿಂದ ಕಳೆದ ರಾತ್ರಿಯಷ್ಟೇ ನಿಧನರಾಗಿದ್ದರು. ಮುಂಜಾನೆ ಡಾಲಿ ಸಹ ಮೃತಪಟ್ಟಿದ್ದಾರೆ. ಮಧ್ಯಾಹ್ನ ಸಹೋದರಿಯರ ಅಂತ್ಯಕ್ರಿಯೆ ನಡೆಯುತ್ತೆ ಎಂದು ಸಹೋದರ ಮನು ತಿಳಿಸಿದ್ದಾರೆ. ನಟಿ ಡಾಲಿಗೆ ಗರ್ಭಕಂಠ ಕ್ಯಾನ್ಸರ್ ಇರುವುದು 2023ರಲ್ಲಿ ಖಚಿತವಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಅವನೀತ್ ಧನೋವಾ ಎಂಬುವರನ್ನು ಡಾಲಿ ಮದುವೆಯಾಗಿದ್ದರು. ಎಮಿಲಿ ಅನ್ನೋ ಪುತ್ರಿ ಇದ್ದಾಳೆ. ದಂಪತಿ ನಡುವೆ ಸಮಸ್ಯೆ ಬಂದು ಬೇರೆಯಾಗಿದ್ದಾರೆ.

ಮೇರಿ ಆಸೀಕಿ ತುಮ್ ಸೇ ಹೆ, ಖೂಬ್ ಲಡಿ ಮರ್ದಾನಿ, ಜಾನ್ಸಿ ಕೀ ರಾಣಿ, ಜನಕ್, ಹಿಟ್ಲರ್ ದೀದಿ, ಕಲಶ, ಡೆವೊನ್ ಕೆ ದೇವ್ ಮಹಾದೇವ್ ಸೇರಿದಂತೆ ಅನೇಕ ಜನಪ್ರಿಯ ಧಾರವಾಹಿಗಳಲ್ಲಿ ಡಾಲಿ ಸೋಹಿ ನಟಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!