ಡಿಎಂಕೆ ಮೈತ್ರಿಕೂಟ ಸೇರಿದ ಕಮಲ್ ಹಾಸನ್ ಪಕ್ಷ

102

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಎಂದಿನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವುದು, ಪಕ್ಷಗಳ ಮೈತ್ರಿ ನಡೆದಿದೆ. ಸ್ಟಾರ್ ನಟ ಕಮಲ್ ಹಾಸನ್ ನಾಯಕತ್ವದ ಮಕ್ಕಳ್ ನೀಧಿ ಮೈಯಂ ಪಕ್ಷ ಶನಿವಾರ ಡಿಎಂಕೆ ಮೈತ್ರಿಕೂಟದ ಎಸ್ ಪಿಎಗೆ ಸೇರ್ಪಡೆಯಾಗಿದೆ.

ದೇಶದ ಹಿತದ ಕಾರಣಕ್ಕೆ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದ್ದೇನೆ. ಹೊರತು ಯಾವುದೇ ಹುದ್ದೆ ಬಯಸಿ ಅಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ. ವಿಡುಥಲೈ ಚಿರುಥೈಗಲ್ ಕಚ್ಚಿ, ಎಂಡಿಎಂಕೆ, ಡಿಎಂಕೆ ಸೇರಿ ಸೆಕ್ಯೂಲರ್ ಪ್ರೊಗ್ರೆಸ್ಸಿವ್ ಅಲಯನ್ಸ್ ಮಾಡಿಕೊಂಡಿವೆ. ಒಕ್ಕೂಟಕ್ಕೆ ಕಮಲ್ ಪಕ್ಷ ಸೇರಿದೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ 39 ಸ್ಥಾನಗಳಲ್ಲಿ ಬರೋಬ್ಬರಿ 38 ರಲ್ಲಿ ಈ ಮೈತ್ರಿಕೂಟ ಗೆಲುವು ಸಾಧಿಸಿತ್ತು. ಈಗ ಮತ್ತೆ ಮೈತ್ರಿ ಮಾಡಿಕೊಂಡಿವೆ. ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಹಾಗೂ ಡಿಎಂಕೆ ನಾಯಕರ ಭೇಟಿ ಶೀಘ್ರದಲ್ಲಿ ಆಗಲಿದೆ.




Leave a Reply

Your email address will not be published. Required fields are marked *

error: Content is protected !!