ಜಾಕ್, ಕೊಹ್ಲಿ ಅಬ್ಬರಕ್ಕೆ ಗಿಲ್ ಟೀಂ ಗಪ್ ಚುಪ್

104

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಐಪಿಎಲ್ ಟೂರ್ನಿಯ 45 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳುರು 9 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಜಾಕ್ ಹಾಗೂ ಕೊಹ್ಲಿ ಅಬ್ಬರದ ಬ್ಯಾಟಿಂಗ್ ಮುಂದೆ ಗಿಲ್ ಪಡೆ ಶರಣಾಗಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್ ಸಿಬಿ ನಾಯಕ ಫಫ್ ಡುಪ್ಲಿಸಿ ಪ್ಲಾನ್ ಆರಂಭದಲ್ಲಿ ಸರಿ ಎನಿಸಿತು. ಆದರೆ ಸಾಯಿ ಸುದರ್ಶನ್, ಶಾರೂಕ್ ಖಾನ್ ಬ್ಯಾಟಿಂಗ್ ನಿಂದ ರನ್ ಬರಲು ಶುರುವಾದ್ಮೇಲೆ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿತು. ಸಾಯಿ ಸುದರ್ಶನ್ ಅಜೇಯ 84(4 ಸಿಕ್ಸ್, 8 ಫೋರ್), ಶಾರೂಕ್ ಖಾನ್ 58(5 ಸಿಕ್ಸ್, 3 ಫೋರ್), ಮಿಲ್ಲರ್ ಅಜೇಯ 26 ರನ್ ಗಳಿಂದಾಗಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು.

ಈ ರನ್ ಬೆನ್ನಹತ್ತಿದ ಆರ್ ಸಿಬಿ ಟೀಂ ಆರಂಭದಿಂದಲೇ ಅಬ್ಬರಿಸಿತು. ನಾಯಕ ಡುಪ್ಲಿಸಿ 3 ಸಿಕ್ಸ್, 1 ಫೋರ್ ನೊಂದಿಗೆ 12 ಬೌಲ್ ಗಳಲ್ಲಿ 24 ರನ್ ಗಳಿಸಿ ಔಟ್ ಆದರು. ನಂತರ ಬಂದ ವಿಲ್ ಜಾಕ್, ವಿರಾಟ್ ಕೊಹ್ಲಿ ಜೊತೆ ಸೇರಿ ಗೆಲುವಿನ ಸೌಧ ಕಟ್ಟಿದ.

ಜಾಕ್ ಬರೋಬ್ಬರಿ 10 ಸಿಕ್ಸ್, 5 ಫೋರ್ ಮೂಲಕ ಕೇವಲ 41 ಬೌಲ್ ಗಳಲ್ಲಿ ಅಜೇಯ ಶತಕ ಪೂರೈಸಿದರು. 3 ಸಿಕ್ಸ್, 6 ಫೋರ್ ಬಾರಿಸಿ ಕೊಹ್ಲಿ 44 ಬೌಲ್ ಗಳಲ್ಲಿ 70 ರನ್ ಗಳಿಸಿ ಅಭಿಮಾನಿಗಳಿಗೆ ಗೆಲುವಿನ ಖುಷಿ ನೀಡಿದರು. ಹೀಗಾಗಿ 16 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿದರು. ವಿಲ್ ಜಾಕ್ ಮ್ಯಾನ್ ಆಫ್ ದಿ ಪ್ಲೇಯರ್ ಆದರು.




Leave a Reply

Your email address will not be published. Required fields are marked *

error: Content is protected !!