ಭಾನುವಾರದ ಬಾಡೂಟಕ್ಕಾಗಿ ಮಾಂಸದಂಗಡಿ ಮುಂದೆ ಜನವೋ ಜನ

327

ಬೆಂಗಳೂರು: ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮಾಂಸದಂಗಡಿಗಳಿಗೆ ಇದೀಗ ಪರವಾನಿಗೆ ನೀಡಿದ ಪರಿಣಾಮ, ಮಾಂಸ ಪ್ರಿಯರಿಗೆ ಎಲ್ಲಿಲ್ಲದ ಖುಷಿ. ಹೀಗಾಗಿ ಚಿಕನ್, ಮಟ್ಟನ್, ಮೊಟ್ಟೆ ತಿನ್ನಲು ಮುಂದಾಗಿದ್ದಾರೆ. ಅದೆ ರೀತಿ ಇಂದು ಭಾನುವಾರದ ಬಾಡೂಟ ಮಾಡಿಕೊಂಡು ತಿನ್ನಲು ಮಾಂಸದಂಗಡಿ ಮುಂದೆ ಜನ ತುಂಬಿಕೊಂಡಿದ್ದಾರೆ.

ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ವಾರದಲ್ಲಿ ಮೂರು ದಿನ ಮಾಂಸ ಮಾರಾಟಕ್ಕೆ ಒಪ್ಪಿಗೆ ನೀಡಲಾಗಿದೆ. ಹೀಗಾಗಿ ಇಂದು ಕರೋನಾದ ಭೀತಿಯ ನಡುವೆಯೂ ಮಾಸ್ಕ್ ಧರಿಸದೆ ಮಾಂಸದ ಅಂಗಡಿ ಮುಂದೆ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡು ಬಂದಿವೆ.

ಜನರ ಈ ಪರಿ ಓಡಾಟ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಇವರಿಗೆ ಬುದ್ದಿನೆ ಇಲ್ಲ ಅನಿಸುತ್ತೆ. ಏನ್ ಹೇಳಿದ್ರೆ ನಮ್ಗೆ ಏನೂ ಹೇಳಿಲ್ಲ ಅನ್ನೋ  ಮಂದಿಗೆ ಲಾಕ್ ಡೌನ್ ಅನ್ನೋದು ಲೆಕ್ಕಕ್ಕೆ ಇಲ್ಲ. ಸ್ವಲ್ಪ ಸಡಲಿಕೆ ಮಾಡಿದ್ರೆ ಸಾಕು ಆಚೆ ಬಂದು ಜಾತ್ರೆ ಮಾಡ್ತಾರೆ. ಅದಕ್ಕೆ ಪದೆಪದೆ ಸಂತೆ, ಮಾಂಸದಂಗಡಿ ಮುಂದಿನ ದೃಶ್ಯಗಳು ಸಾಕ್ಷಿಯಾಗ್ತಿವೆ.




Leave a Reply

Your email address will not be published. Required fields are marked *

error: Content is protected !!