ತಮಿಳುನಾಡಿನಲ್ಲಿ ಕರೋನಾದಿಂದ ಇಂದು ಇಬ್ಬರ ಸಾವು

282

ಚೆನ್ನೈ: ಕರೋನಾ ಮಹಾಮಾರಿಗೆ ತಮಿಳುನಾಡಿನಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಚೆನ್ನೈ ನಗರದಲ್ಲಿ ಕರೋನಾ ಸೋಂಕಿನಿಂದ ಬಳಲುತ್ತಿದ್ದ 60 ಹಾಗೂ 71 ವರ್ಷದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಕರೋನಾಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಇವರಿಬ್ಬರ ಸಾವಿನಿಂದಾಗಿ ಭಾರತದಲ್ಲಿ 79 ಮಂದಿ ಕರೋನಾದಿಂದ ಸಾವನ್ನಪ್ಪಿದ್ದಾರೆ. 3,374 ಮಂದಿಯಲ್ಲಿ ಕರೋನಾ ಕಾಣಿಸಿಕೊಂಡಿದೆ. ಇನ್ನು ವಿಶ್ವದಲ್ಲಿ ಅತೀ ಹೆಚ್ಚು ಕರೋನಾ ಸೋಂಕಿತರ ಸಂಖ್ಯೆ ಇರೋದು ಅಮೆರಿಕಾದಲ್ಲಿ 3 ಲಕ್ಷದ 11 ಸಾವಿರದ 635ಕ್ಕೂ ಹೆಚ್ಚು ಜನ. ಇದಕ್ಕೆ 8,454 ಜನ ಬಲಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!