ಸಿಲಿಂಡರ್ ದರದಲ್ಲಿ 100 ರೂ. ಇಳಿಕೆ

94

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ದಿನಬಳಕೆ ವಸ್ತುಗಳ ಬೆಲೆಯಲ್ಲಿ ಇಳಿಕೆ ಮಾಡುವ ಕೆಲಸ ಮಾಡುತ್ತಿದೆ. ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಸಿಲಿಂಡರ್ ದರದಲ್ಲಿ 100 ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು ಮಹಿಳಾ ದಿನ. ನಮ್ಮ ಸರ್ಕಾರ ಸಿಲಿಂಡರ್ ದರದಲ್ಲಿ 100 ರೂಪಾಯಿ ಕಡಿಮೆ ಮಾಡಿದೆ. ಇದು ದೇಶದ ಲಕ್ಷಾಂತರ ಕುಟುಂಬಸ್ಥರ ಆರ್ಥಿಕ ಹೊರೆ ಕಡಿಮೆ ಮಾಡುತ್ತದೆ. ನಾರಿ ಶಕ್ತಿ ಫಲಾನುಭವಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.

ಸಿಲಿಂಡರ್ ಕೈಗೆಟಕುವಂತೆ ಇರಬೇಕು. ಕುಟುಂಬಗಳ ಕಾಳಜಿ ಹಾಗೂ ಆರೋಗ್ಯಯುತವ ಪರಿಸರ ಖಚಿತತೆಯ ಗುರಿ ಹೊಂದಿದ್ದೇವೆ. ಸುಲಭ ಬದುಕು ಮುಖ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!