ವಕೀಲ ಜಗದೀಶ್, ನಟ ಚೇತನ್ ಬಂಧನ: ಪೊಲೀಸರ ವಿರುದ್ಧ ಆಕ್ರೋಶ

238

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋರ್ಟ್ ಅಂಗಳದಲ್ಲಿ ಗಲಾಟೆ ನಡೆಸಲಾಗಿದೆ, ಗಲಭೆ, ಹಲ್ಲೆಗೆ ಸಂಬಂಧಿಸಿದಂತೆ ವಕೀಲ ಜಗದೀಶ್ ಮಹಾದೇವ್ ಬಂಧನವಾಗಿದೆ. ನ್ಯಾಯಾಧೀಶರೊಬ್ಬರ ವಿರುದ್ಧ ಆಕ್ಷೇಪಣಾರ್ಹ ಬರಹ ಪೋಸ್ಟ್ ಮಾಡಿದ್ದಾರೆ ಎಂದು ನಿನ್ನೆ ನಟ ಚೇತನ್ ಬಂಧನವಾಗಿದೆ. ಈ ಬಗ್ಗೆ ಪೊಲೀಸರು ವಿರುದ್ಧ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಕೀಲ ಜಗದೀಶ್ ಎಷ್ಟೊಂದು ಮಾಹಿತಿ ನೀಡಿದರೂ, ದೂರು ನೀಡಿಲು ಹೋದರು ಆರೋಪ ಕೇಳಿ ಬಂದವರ ವಿರುದ್ಧ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಅವರನ್ನು ಕರೆದು ವಿಚಾರಣೆ ಮಾಡುವ ಕೆಲಸ ಮಾಡಿಲ್ಲ. ಆದರೆ, ವಕೀಲ ಜಗದೀಶರನ್ನು ಬಂಧಿಸಲಾಗಿದೆ. ಇದೀಗ ನಟ ಚೇತನ್ ಬಂಧನವಾಗಿದೆ. ಆದರೆ, ಪ್ರಚೋಧನಕಾರಿ ಹೇಳಿಕೆ ನೀಡಿರುವ, 144 ಸೆಕ್ಷನ್ ಇದ್ದರೂ ಮೆರವಣಿಗೆ ನಡೆಸಿರುವ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವ ಈಶ್ವರಪ್ಪ ವಿರುದ್ಧ ಪೊಲೀಸರು ಯಾಕೆ ಕ್ರಮ ತೆಗೆದುಕೊಂಡಿಲ್ಲವೆಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಲು ರಾಜ್ಯದ ಹಲವು ಸಚಿವರು, ಶಾಸಕರು, ರಾಜಕಾರಣಿಗಳು ಕಾರಣರಾಗಿದ್ದಾರೆ. ಅವರು ನೀಡುತ್ತಿರುವ ಪ್ರಚೋದನಾತ್ಮಕ ಹೇಳಿಕೆಗಳಿಂದ ವಿಶ್ವ ಮಟ್ಟದಲ್ಲಿ ರಾಜ್ಯಕ್ಕೆ ಕೆಟ್ಟು ಹೆಸರು ಬರುತ್ತಿದೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳದ ಪೊಲೀಸರು ವಕೀಲ ಜಗದೀಶ್, ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರಂತಹವರನ್ನು ಬಂಧಿಸುತ್ತಿದೆ ಎಂದು ಕಿಡಿ ಕಾರುತ್ತಿದ್ದು, ಹೋರಾಟಕ್ಕೂ ಸಜ್ಜಾಗುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!