ಬ್ರೇಕಿಂಗ್ ನ್ಯೂಸ್
Search

ಇದು ಮಫ್ತಿ ರಿಮೇಕ್ ಚಿತ್ರವೇ?

267

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರ 107ನೇ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದನ್ನು ನೋಡಿದವರು ಕನ್ನಡದ ಸೂಪರ್ ಹಿಟ್ ಮಫ್ತಿ ರಿಮೇಕ್ ಇರಬಹುದು ಎಂದುಕೊಳ್ಳುತ್ತಿದ್ದಾರೆ. ಕಾರಣ ಏನು ಅಂದರೆ, ಶಿವಣ್ಣನ ಗೆಟಪ್ ರೀತಿಯಲ್ಲಿ ನಂದಮೂರಿ ಕಾಣಿಸಿಕೊಂಡಿರುವುದು. ಡ್ರೆಸಿಂಗ್ ಸ್ಟೈಲ್, ಹಿಂದಿನ ಗಣಿ ಚಿತ್ರಣ, ಅದೆ ಎಸ್ ಯುವಿ ಕಾರ್ ನೋಡಿದ ಜನರು ಇದು ಮಫ್ತಿ ರಿಮೇಕ್ ಇರಬಹುದು ಎಂದುಕೊಳ್ಳುತ್ತಿದ್ದಾರೆ.

ಗೋಪಿಚಂದ್ ಮಲ್ಲಿನೇನಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಇನ್ನು ಇದಕ್ಕೆ ಹೆಸರು ಇಟ್ಟಿಲ್ಲ. ನಂದಮೂರಿ 107ನೇ ಚಿತ್ರವಾಗಿರುವುದರಿಂದ ಎನ್ ಬಿಕೆ 107 ಎಂದಿದ್ದಾರೆ. ನಟಿ ಶ್ರುತಿ ಹಾಸನ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟ ದುನಿಯಾ ವಿಜಿ ವಿಲನ್ ಪಾತ್ರದಲ್ಲಿ ಎಂಟ್ರಿಕೊಡುತ್ತಿದ್ದಾರೆ.

ನಂದಮೂರಿ ಗೆಟಪ್ ಶಿವಣ್ಣನ ರೀತಿಯಲ್ಲಿ ಮಾತ್ರವಿದೆ. ಆದರೆ, ಇದು ಮಫ್ತಿ ರಿಮೇಕ್ ಅಲ್ಲವೆಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಜೊತೆಗೆ ಮಫ್ತಿ ನಿರ್ಮಾಪಕ ಜಯಣ್ಣ ಸಹ ಇದು ರಿಮೇಕ್ ಅಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!