ಪಂಚಮಸಾಲಿ ಸಮಾಜ ಕಾಂಗ್ರೆಸ್ಸಿಗೆ ಬೆಂಬಲಿಸಿದೆ ಎನ್ನುವುದನ್ನು ಖಂಡಿಸುತ್ತೇನೆ: ಸಂತೋಷ ಪಾಟೀಲ

155

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಡೀ ಪಂಚಮಸಾಲಿ ಸಮಾಜ ಕಾಂಗ್ರೆಸ್ಸಿಗೆ ಬೆಂಬಲಿಸಿದೆ ಎನ್ನುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಸಮಾಜದ ಮುಖಂಡ, ಬಿಜೆಪಿ ಮಂಡಳ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲಿ ಎಲ್ಲ ಸಮಾಜದ ಮುಖಂಡರು ಇರುತ್ತಾರೆ. ಅದು ಸಹಜ. ಆದರೆ, ಇಡೀ ಪಂಚಮಸಾಲಿ ಸಮಾಜ ಕಾಂಗ್ರೆಸ್ ಬೆಂಬಲಿಸಿದೆ ಎನ್ನುವುದನ್ನು ಖಂಡಿಸುತ್ತೇನೆ. 2ಎ ಮೀಸಲಾತಿಗಾಗಿ ಜಯಮೃತ್ಯುಂಜಯ ಸ್ವಾಮೀಜಿಗಳು ನಿರಂತರ ಹೋರಾಟ ಮಾಡುತ್ತಿದ್ದಾರೆ. ನಮ್ಮ ನಾಯಕರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮದೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದರು. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನರ್ ಸೇರಿ ಕಾಂಗ್ರೆಸ್ ನವರು ವಿಧಾನಸೌಧದಲ್ಲಿ ನಮ್ಮ ಪರ ಯಾರೂ ಧ್ವನಿ ಎತ್ತುತ್ತಿಲ್ಲ ಎಂದರು.

ನಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಕಾಂಗ್ರೆಸ್ಸಿನವರಿಂದ ಮುಜುಗರ ತರುವಂತಹ ಹೇಳಿಕೆ ಇದಾಗಿದೆ. ನಿನ್ನೆಯ ಅವರ ಸಮಾವೇಶ ಕಳಪೆಯಾಗಿತ್ತು. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗುತ್ತೆ ಎಂದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿದ್ದರಾಮಗೌಡ ಪಾಟೀಲ ಹೂವಿನಹಳ್ಳಿ ಮಾತನಾಡಿ, ಕಾಂಗ್ರೆಸ್ ಸಮಾವೇಶಕ್ಕೆ ನಮ್ಮ ಸಮಾಜದವರು ಬಹಳ ಜನ ಹೋಗಿಲ್ಲ. ಮೋದಿ ಒಳ್ಳೆಯ ಮನುಷ್ಯ ಎಲ್ಲರೂ ಅವರಿಗೆ ಬೆಂಬಲಿಸುತ್ತಾರೆ ಎಂದರು. ಸಮಾಜದ ಮುಖಂಡ ಎಂ.ಎನ್ ಪಾಟೀಲ ಮಾತನಾಡಿ, ಕಾಂಗ್ರೆಸ್ ನವರು ನಮ್ಮ ಸಮಾಜದವರನ್ನು ರಾಜಕೀಯವಾಗಿ ತುಳಿದಿದ್ದಾರೆ. ಬಿಜೆಪಿಯಲ್ಲಿ ಸಣ್ಣಸಣ್ಣ ಸಮಾಜದವರನ್ನೂ ಗುರುತಿಸುತ್ತಾರೆ ಎಂದರು.

ಈ ವೇಳೆ ಸಾವಿತ್ರಿ ಹಿಕ್ಕಣಗುತ್ತಿ, ಶ್ರೀಶೈಲ ಚಳ್ಳಗಿ, ಮಾಂತಗೌಡ ಬಿರಾದಾರ, ಎಂ.ಪಿ ಬಾದನ, ಗುಂಡು ಕೆರೊಡೆ, ಮಲ್ಲು ಬಗಲಿ, ಶಿವರಾಜ ಕೆಂಗಿನಾಳ, ಸಂಗಮೇಶ ಮನಿಕಟ್ಟಿ, ಮಹೇಶ ಪಾಟೀಲ, ನವೀನ ಚಟ್ಟರಕಿ, ಪ್ರಮೋದ ಬಾಗೇವಾಡಿ, ರಮೇಶ ಪೀರಶೆಟ್ಟಿ, ಗಂಗಾಧರ ಕಡಗಂಟಿ, ಬಸವರಾಜ ಬಗಲಿ ಸೇರಿ ಇತರರಿದ್ದರು.




Leave a Reply

Your email address will not be published. Required fields are marked *

error: Content is protected !!