ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಆರ್ ಸಿಬಿ ಗೆಲುವಿನ ಆಟ

85

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬೆಂಗಳೂರು: ಐಪಿಎಲ್-2024 ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಸೋಲುವ ಮೂಲಕ ಟೂರ್ನಿಯಿಂದ ಹೊರ ಬೀಳುವ ಹಂತದಲ್ಲಿ ಬಂದ ಆರ್ ಸಿಬಿ ಈಗ ಸತತ 3 ಪಂದ್ಯಗಳನ್ನು ಗೆಲ್ಲುವ ಮೂಲಕ 11 ಪಂದ್ಯಗಳಲ್ಲಿ 4 ರಲ್ಲಿ ಜಯಿಸಿ 8 ಪಾಯಿಂಟ್ ಗಳೊಂದಿಗೆ 7ನೇ ಸ್ಥಾನಕ್ಕೆ ಬಂದಿದೆ.

ಶನಿವಾರ ಸಂಜೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 4 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸುವುದೊಂದರಿಗೆ ಜಿಟಿ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿ ಆರ್ ಸಿಬಿ ನಾಯಕ ಡುಪ್ಲಸಿ ನಿರ್ಧಾರವನ್ನು ಬೌಲರ್ ಗಳು ಸರಿಯಾಗಿ ನಿಭಾಯಿಸಿದರು. ಶುಭ್ಮನ್ ಗಿಲ್ ಪಡೆ 19.3 ಓವರ್ ಗಳಲ್ಲಿ 147 ರನ್ ಗಳಿಗೆ ಆಲೌಟ್ ಆಯಿತು.

ಶಾರೂಕ್ ಖಾನ್ 37, ಮಿಲ್ಲರ್ 30, ತೇವಾಟಿ 35 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ಆರ್ ಸಿಬಿ ಪರ ಸಿರಾಜ್, ಯಶ್ ದಯಾಳ್, ವೈಷಾಖ್ ವಿಜಯಕುಮಾರ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಗ್ರೀನ್, ಕರಣ್ ತಲಾ 1 ವಿಕೆಟ್ ಪಡೆದರು.

ಅಲ್ಪ ಗುರಿ ಬೆನ್ನು ಹತ್ತಿದ ಆರ್ ಸಿಬಿ ನಾಯಕ ಡುಪ್ಲಸಿ ಆರಂಭದಲ್ಲಿ ಘರ್ಜಿಸಿದರು. 3 ಸಿಕ್ಸ್, 10 ಫೋರ್ ಗಳೊಂದಿಗೆ 23 ಬೌಲ್ ಗಳಲ್ಲಿ 63 ರನ್ ಚಚ್ಚಿದರು. ಹೀಗಾಗಿ ಡುಪ್ಲಸಿ, ಕೊಹ್ಲಿ ಜೋಡಿ 5.5 ಓವರ್ ಗಳಲ್ಲಿ 92 ರನ್ ಗಳಿಸಿದರು. ಲಿಟಲ್ ಬೌಲಿಂಗ್ ನಲ್ಲಿ ನಾಯಕ ಕ್ಯಾಚ್ ಕೊಟ್ಟು ಔಟ್ ಆದರು.

ಒಳ್ಳೆಯ ಅಡಿಪಾಯ ಬಿದ್ದಿದೆ, 10 ಓವರ್ ನಲ್ಲಿ ಪಂದ್ಯ ಮುಗಿಯುತ್ತೆ ಎಂದುಕೊಳ್ಳುವಷ್ಟರಲ್ಲಿ ವಿಕೆಟ್ ಗಳ ಪರೇಡ್ ನಡೆಯಿತು. ವಿಲ್ ಜಾಕ್ಸ್ 1, ಪಟಿದಾರ್ 2, ಮ್ಯಾಕ್ಸ್ ವೆಲ್ 4, ಗ್ರೀನ್ 1 ರನ್ ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿ ಹೋದರು. ಜಿಟಿ ಬೌಲರ್ ಜೋಶ್ ಲಿಟಲ್ ಬ್ಯಾಕ್ ಟು ಬ್ಯಾಕ್ ವಿಕೆಟ್ ತೆಗೆಯುವ ಮೂಲಕ ಆರ್ ಸಿಬಿ ಫ್ಯಾನ್ಸ್ ಗಳಿಗೆ ಶಾಕ್ ನೀಡಿದರು. 92ಕ್ಕೆ 1 ವಿಕೆಟ್ ಇದ್ದಿದ್ದು, 117 ರನ್ ಅಂದರೆ 25 ರನ್ ಗಳಿಷ್ಟುವರಲ್ಲಿ 5 ವಿಕೆಟ್ ಗಳು ಬಿದ್ದವು. ಕೊಹ್ಲಿ 4 ಸಿಕ್ಸ್, 2 ಫೋರ್ ನೊಂದಿಗೆ 42 ರನ್ ಗಳಿಸಿ ಔಟ್ ಆದರು. ಮುಂದೆ ದಿನೇಶ್ ಕಾರ್ತಿಕ್ 21, ಸ್ವಪ್ನಿಲ್ ಸಿಂಗ್ 15 ರನ್ ಗಳಿಸುವುದರೊಂದಿಗೆ 13.4 ಓವರ್ ಗಳಲ್ಲಿ 152 ರನ್ ಗಳಿಸಿ ಗೆಲುವಿನ ನಗೆ ಬೀರಿದರು. ಮೊಹಮ್ಮದ್ ಸಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!