ಶಿವಮೊಗ್ಗ ಪ್ರಕರಣ: ರಾಜಕಾರಣಿಗಳು ಸೇಫ್.. ಅಧಿಕಾರಿಗಳ ತಲೆದಂಡ?

949

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಭಜರಂಗದಳದ ಸಹ ಸಂಯೋಜಕ ಹರ್ಷ ಹತ್ಯೆ ಪ್ರಕರಣ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಈ ಸಂಬಂಧ ಈಗಾಗ್ಲೇ 8 ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಯ ನಂತರ ಜಿಲ್ಲೆಯಾದ್ಯಂತ ದೊಂಬಿ, ಗಲಾಟೆಯಿಂದ ಹಿಂಸಾಚಾರ ನಡೆದಿದೆ. ಇದಕ್ಕೆ ಅಧಿಕಾರಿಗಳು ಹೊಣೆ ಎಂದು, ಸರ್ಕಾರ ವರ್ಗಾವಣೆಗೆ ಮುಂದಾಗಿದೆಯಂತೆ.

144 ಸೆಕ್ಷನ್ ಜಾರಿಯಿದ್ದರೂ ಹರ್ಷ ಮೃತದೇಹ ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಹೇಗೆ? ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಗ್ರಹಿಸದೆ ಸುಮ್ಮನೆ ಉಳಿದುಕೊಂಡಿದ್ದೇಕೆ ಎಂದು ಹೇಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವರ್ಗಾವಣೆ ಮೂಲಕ ವಿಪಕ್ಷಗಳ ಟೀಕೆಯಿಂದ ಸರ್ಕಾರ ಬಚಾವ್ ಆಗಲು ನೋಡುತ್ತಿದೆಯಂತೆ.

ವಿಚಿತ್ರ ಅಂದರೆ 144 ಸೆಕ್ಷನ್ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಸಚಿವರು ಸೇರಿ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮೇಲಿಂದ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಪೊಲೀಸ್ ತನಿಖೆಗೂ ಮೊದಲೇ ಆರೋಪಿಗಳ ಧರ್ಮದ ಮೇಲೆ ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಹೀಗಿದ್ದರೂ ಸರ್ಕಾರ, ಶಿವಮೊಗ್ಗ ಹಿಂಸಾಚಾರವನ್ನು ಅಧಿಕಾರಿಗಳ ತಲೆಗೆ ಕಟ್ಟಿ ವರ್ಗಾವಣೆಗೆ ಮುಂದಾಗಿದೆಯಂತೆ.




Leave a Reply

Your email address will not be published. Required fields are marked *

error: Content is protected !!