ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿಗೆ ಸುವರ್ಣ ಕರ್ನಾಟಕ ಪ್ರಶಸ್ತಿ

227

ಪ್ರಜಾಸ್ತ್ರ ಸುದ್ದಿ

ದೇವರ ಹಿಪ್ಪರಗಿ: ಕನ್ನಡ ಪ್ರಭ ಪತ್ರಿಕೆಯ ತಾಲೂಕು ವರದಿಗಾರರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರನ್ನು ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು, ದೇವರ ಹಿಪ್ಪರಗಿ ತಾಲೂಕು ಘಟಕ, ಕನ್ನಡ ಜಾನಪದ ಪರಿಷತ್, ಬೆಂಗಳೂರು ಹಾಗೂ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಫೆ.25ರಂದು ನಡೆಯುತ್ತಿದೆ. ಈ ವೇಳೆ ಸಾಧಕರಿಗೆ ಪಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ತಾಲೂಕಿನ ಪಡಗಾನೂರ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಹುಣಸ್ಯಾಳ ಗ್ರಾಮದ ಮೂಲದವರಾದ ಮಲ್ಲಿಕಾರ್ಜುನ್ ಪಟ್ಟಣಶೆಟ್ಟಿ ಅವರ ಪತ್ರಿಕಾ ಸೇವೆ ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಕಾನಿಪ ತಾಲೂಕಾಧ್ಯಕ್ಷ ಸಂಗಮೇಶ ಉತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!