ವಿಧಾನಸಭೆ ಕಲಾಪ ಸೋಮುವಾರಕ್ಕೆ ಮುಂದೂಡಿಕೆ

116

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸದನದಲ್ಲಿ ವಿರೋಧ ಪಕ್ಷಗಳ ಧರಣಿಯಿಂದಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸುವುದನ್ನು ವಿರೋಧಿಸಿ ವಿಪಕ್ಷಗಳು ಧರಣಿ ನಡೆಸಿದವು.

ಶುಕ್ರವಾರ ಮುಂಜಾನೆ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಆಗ 10 ನಿಮಿಷಗಳ ಕಾಲ ಕಲಾಪ ಮುಂದೂಡಲಾಯಿತು. ಬಳಿಕ ಸಭಾಧ್ಯಕ್ಷರು ಸಂಧಾನ ನಡೆಸಿದರು ಫಲ ನೀಡಲಿಲ್ಲ. ಕಲಾಪ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಧರಣಿ ಶುರುವಾಯಿತು.

ವಿಪಕ್ಷಗಳ ಧರಣಿ ನಡುವೆ ಎರಡು ಮಸೂದೆಗಳು ಅಂಗೀಕಾರಗೊಂಡವು. ಈ ನಡುವೆ ಕೇಂದ್ರವನ್ನು ಬೆಂಬಲಿಸುವ ನಿರ್ಣಯ ಮಂಡಿಸಲು ವಿಪಕ್ಷ ನಾಯಕ ಆರ್.ಅಶೋಕ ಮುಂದಾದರು. ಆಗ ಸಭಾಧ್ಯಕ್ಷರು ಅವಕಾಶ ನೀಡದೆ ಸದನವನ್ನು ಸೋಮವಾರಕ್ಕೆ ಮುಂದೂಡಿದರು.




Leave a Reply

Your email address will not be published. Required fields are marked *

error: Content is protected !!