ಸಿಂದಗಿ ಜನತೆ ಮನಗೆದ್ದ ‘ಅಯಾಸಿಸ್’

815

ಸಿಂದಗಿ: ಪ್ರಜಾಸ್ತ್ರ ವೆಬ್ ಪತ್ರಿಕೆ ಆಯೋಜಿಸಿದ್ದ ‘ಅಯಾಸಿಸ್’ ನಾಟಕ ಹಾಗೂ ಸಂಗೀತ ಸಂಜೆ ತುಂಬಾ ಅದ್ಧೂರಿಗೆ ನೆರವೇರಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಯಲಾಟ ಕಲಾವಿದರಾದ ಭೀಮರಾಯ ಬೋರಗಿ ಕಾರ್ಯಕ್ರಮ ಉದ್ಘಾಟಿಸಿದ್ರು.

ಪ್ರಾಸ್ತಾವಿಕವಾಗಿ ಮಾತ್ನಾಡಿದ ಸಂಪಾದಕ ನಾಗೇಶ ತಳವಾರ

ಈ ವೇಳೆ ಪ್ರಾಸ್ತಾವಿಕವಾಗಿ ಮಾತ್ನಾಡಿದ ಸಂಪಾದಕ ನಾಗೇಶ ತಳವಾರ, ನಾಟಕದ ರಚನೆ, ನಿರ್ದೇಶನ ಹಾಗೂ ಇಡೀ ತಂಡ ರೆಡಿಯಾಗಿರುವ ಕುರಿತು ವಿವರಿಸಿದ್ರು. ಅಲ್ದೇ, ಇಡೀ ಕಾರ್ಯಕ್ರಮಕ್ಕೆ ಸಹಾಯ ಸಹಕಾರ ನೀಡಿದ ಪ್ರತಿಯೊಬ್ಬರನ್ನ ನೆನಪಿಸಿಕೊಂಡ ಅವರು, ನೆನಗುದಿಗೆ ಬಿದ್ದಿರುವ ನಟಭಯಂಕರ ಹಂದಿಗನೂರು ಸಿದ್ದರಾಮಪ್ಪನವರ ಭವನ ನಿರ್ಮಾಣದ ಬಗ್ಗೆ ಶಾಸಕರು ಹಾಗೂ ಗಣ್ಯರು ಗಮನ ಹರಿಸಬೇಕೆಂದು ಈ ವೇಳೆ ಅವರಲ್ಲಿ ಮನವಿ ಮಾಡಿಕೊಂಡ್ರು.

ಮುಖ್ಯ ಅತಿಥಿಗಳಾದ ಶಾಸಕ ಎಂ.ಸಿ ಮನಗೂಳಿ ಮಾತ್ನಾಡಿ, ಸಿಂದಗಿಯಲ್ಲಿ ಹೊಸ ಹೊಸ ಪ್ರಯೋಗಗಳು ಆಗ್ತಿರುವುದು ನಿಜಕ್ಕೂ ಖುಷಿಯ ವಿಚಾರ ಅಂತಾ ಹೇಳಿದ್ರು. ಇನ್ನೋರ್ವ ಅತಿಥಿ ಜಿ.ಆರ್ ಗ್ರೂಪ್ ಮುಖ್ಯಸ್ಥರಾದ ಶಿವಾನಂದ ಪಾಟೀಲ ಸೋಮಜಾಳ ಮಾತ್ನಾಡಿ, ಪ್ರಜಾಸ್ತ್ರ ವೆಬ್ ಪತ್ರಿಕೆಯ ಈ ಪ್ರಯೋಗ ಯಶಸ್ಸು ಸಿಗಲಿ. ಇನ್ನು ಹೆಚ್ಚಿನ ರೀತಿಯಲ್ಲಿ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮಗಳನ್ನ ಮಾಡಲಿ ಅಂತಾ ಶುಭ ಕೋರಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಪೂಜ್ಯ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಿಂದಗಿಯ ಪ್ರತಿಭೆಗಳು ಬೇರೆ ಬೇರೆ ಭಾಗಗಳಲ್ಲಿ ಚದುರಿ ಹೋಗಿವೆ. ಅವರು ಮರಳಿ ತಮ್ಮೂರಿಗೆ ಬಂದು ಹೊಸತನವನ್ನ ಈ ಭಾಗದ ಜನಕ್ಕೆ ಊಣಬಡಿಸುವ ಮೂಲಕ ನಮ್ಮೂರಿಗೆ ಹೆಮ್ಮೆ ತರುತ್ತಿದ್ದಾರೆ ಅಂತಾ ಹೇಳಿದ್ರು. ಇಂಥಾ ಹೊಸ ಹೊಸ ಪ್ರಯೋಗಗಳು ಸಿಂದಗಿಯಲ್ಲಿ ಆಗಬೇಕು. ನಮ್ಮೂರಿನ ಪ್ರತಿಭೆಗಳನ್ನ ಬೆಳೆಸುವ ಕೆಲಸ ನಾವೆಲ್ಲ ಮಾಡೋಣ ಅಂತಾ ಹೇಳಿದ್ರು.

ಇನ್ನು ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಶಾಂತಗಂಗಾಧರ ಜಗದ್ಗುರುಗಳು ಮಾತ್ನಾಡಿ, ಪ್ರಜಾಸ್ತ್ರ ವೆಬ್ ಪತ್ರಿಕೆ ಹೊಸ ಸಾಧನೆಯನ್ನ ಸಿಂದಗಿಯಲ್ಲಿ ಮಾಡಿದೆ. ನಾಡಿನ ಬೇರೆ ಬೇರೆ ಭಾಗಗಳಲ್ಲಿರುವ ಕಲಾವಿದರನ್ನ ಒಟ್ಟುಗೂಡಿಸಿ ‘ಅಯಾಸಿಸ್’ ನಾಟಕ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಅಂತಾ ಹೇಳಿದ್ರು. ಈ ವೇಳೆ ಹಿರಿಯ ಬಯಲಾಟ ಕಲಾವಿದರಾದ ಭೀಮರಾಯ ಬೋರಗಿ, ವುಡ್ ಕಲಾವಿದರಾದ ಈರಣ್ಣ ಬಡಗೇರ ಹಾಗೂ ನಿರ್ದೇಶಕ ಯಶವಂತ ಕಾರ್ಗಳ್ಳಿ ಅವರ ಸಾಧನೆ ಪರಿಗಣಿಸಿ ವಿಶೇಷ ಸನ್ಮಾನ ಮಾಡಲಾಯ್ತು. ಕಾರ್ಯಕ್ರಮಕ್ಕೆ ಆರ್ಥಿಕ ಸಹಾಯ ನೀಡಿದವರನ್ನ, ಬೆನ್ನೆಲುಬಾಗಿ ನಿಂತವರನ್ನ ಗೌರವಿಸಲಾಯ್ತು.

ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ ಸುಣಗಾರ, ಪುರಸಭೆ ಮುಖ್ಯಾಧಿಕಾರಿ ಸೈಯದ ಅಹ್ಮದ, ವ್ಯಾಪಾರಸ್ಥರಾದ ವಿನೋದ ಹಂಚನಾಳ, ಡಾ.ಎಪಿಜೆ ಅಬ್ದುಲ್ ಕಲಾಂ ಸಂಘದ ಅಧ್ಯಕ್ಷ ಸೈಪನಸಾಬ ನಾಟೀಕಾರ, ಶಿಕ್ಷಕರಾದ ರಮೇಶ ದೂಳಭಾ, ನಿರ್ದೇಶಕ ಯಶವಂತ ಕಾರ್ಗಳ್ಳಿ ಉಪಸ್ಥಿತರಿದ್ರು. ವಿಜಯಲಕ್ಷ್ಮಿ ಮೆಟಗಾರ ನಿರೂಪಣೆ ಮಾಡಿದ್ರು. ಸಂಜೀವಕುಮಾರ ಡಾಂಗಿ ಸ್ವಾಗತ ಕೋರಿದ್ರು. ಬಸವರಾಜ ಕುರನಳ್ಳಿ ವಂದಿಸಿದ್ರು.




Leave a Reply

Your email address will not be published. Required fields are marked *

error: Content is protected !!