ಪೋಶೆ ಕಾರು ದುರಂತ, ಬಾಲಕನಿಗೆ ಮದ್ಯ ನೀಡಿದ 2 ರೆಸ್ಟೋರೆಂಟ್ ಬಂದ್

102

ಪ್ರಜಾಸ್ತ್ರ ಸುದ್ದಿ

ಪುಣೆ: ಕಲ್ಯಾಣಿನಗರ ಪ್ರದೇಶದಲ್ಲಿ ಭಾನುವಾರ ನಸುಕಿನಜಾವ ಸಂಭವಿಸಿದ ಕಾರ್ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾಗಿದ್ದ ಬಾಲಕ ಮದ್ಯಪಾನ ಮಾಡಿದ್ದ. ಅವನಿಗೆ ಮದ್ಯ ನೀಡಿದ ಕೋಸಿ ರೆಸ್ಟೋರೆಂಟ್ ಹಾಗೂ ಹೋಟೆಲ್ ಬ್ಲಾಕ್ ಕ್ಲಬ್ ಗೆ ಬೀಗ ಹಾಕಲಾಗಿದೆ.

ಪುಣೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಹಾರಾಷ್ಟ್ರ ಅಬಕಾರಿ ಇಲಾಖೆ ಈ ಕ್ರಮ ಕೈಗೊಂಡಿದೆ. ಉದ್ಯಮಿಯ 17 ವರ್ಷದ ಮಗ ಐಷಾರಾಮಿ ಸ್ಫೋರ್ಟ್ಸ್ ಕಾರಾದ ಪೋಶೆ ಚಲಾಯಿಸಿ ಅನಿಸ್ ಅವಧಿಯಾ ಹಾಗೂ ಅಶ್ವಿನಿ ಕಾಸ್ಟಾ ಅನ್ನೋ ಇಬ್ಬರು ಅಮಾಯಕ ಟೆಕ್ಕಿಗಳ ಸಾವಿಗೆ ಕಾರಣನಾಗಿದ್ದಾನೆ.

ಬಾಲ ನ್ಯಾಯಾಲಯ ಆರೋಪಿಗೆ 15 ಗಂಟೆಯೊಳಗೆ ಜಾಮೀನು ನೀಡಿದೆ. ಅಪಘಾತದ ಕುರಿತು ಪ್ರಬಂಧ ಬರೆಯಲು ಹೇಳಿದೆ. 20 ದಿನಗಳ ಕಾಲ ಯರವಾಡ ಸಂಚಾರಿ ಠಾಣೆ ಪೊಲೀಸರೊಂದಿಗೆ ಕೆಲಸ ಮಾಡಲು ಹೇಳಿದೆ. ಶ್ರೀಮಂತನ ಮಗನಿಗೆ ಜಾಮೀನು ನೀಡಿರುವ ಕುರಿತು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ವಿಡಿಯೋ ಮಾಡಿ ಘಟನೆಯನ್ನು ಖಂಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!