ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟೋಕಿಯೊ: 2021 ಒಲಿಂಪಿಕ್ಸ್ ಕ್ರೀಡಾ ಕೂಟಕ್ಕೆ ಸರಳವಾಗಿ ಚಾಲನೆ ನೀಡಲಾಗಿದೆ. ಸಾಂಕ್ರಾಮಿಕ ಕರೋನಾದಿಂದಾಗಿ ಮೊದಲ ಬಾರಿಗೆ ಸರಳವಾಗಿ ವಿಶ್ವದ ಅತಿದೊಡ್ಡ ಕ್ರೀಡಾಕೂಟ ಪ್ರಾರಂಭವಾಗಿದೆ. ಭಾರತದ ಪರವಾಗಿ ಬಾಕ್ಸರ್ ಮೇರಿ ಕೋಮ್ ಹಾಗೂ ಹಾಕಿ ತಂಡದ ಕ್ಯಾಪ್ಟನ್ ಮನ್ ಪ್ರೀತ್ ಸಿಂಗ್ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದ್ರು.
ಮೇರಿ ಹಾಗೂ ಮನ್ ಪ್ರೀತಿ ಮುಂದೆ ಹೆಜ್ಜೆ ಹಾಕ್ತಿದ್ರೆ, ಆಯ್ದ 20 ಆಟಗಾರರು ಅವರ ಹಿಂದೆ ಪಥಸಂಚಲನ ನಡೆಸಿದ್ರು. ಜಪಾನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನ ಪ್ರಧಾನಿ ಮೋದಿ ಸ್ಕ್ರೀನ್ ಮೂಲಕ ನೋಡಿ ಖುಷಿ ಪಟ್ಟರು. ಇನ್ನು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಚಪ್ಪಾಳೆ ತಟ್ಟಿ ಸ್ವಾಗತಿಸುವ ಮೂಲಕ ಶುಭ ಹಾರೈಸಿದ್ರು.