ಪ್ರಜಾಸ್ತ್ರ ಸುದ್ದಿ
ಕೊಚ್ಚಿ: ಆನ್ಲೈನ್ ಶಾಪಿಂಗ್ ಜಮಾನಾ ಶುರುವಾದಾಗಿನಿಂದ ಅನೇಕರು ಮಾರುಕಟ್ಟೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ಊಟ ತಿಂಡಿಯಿಂದ ಎಲ್ಲವನ್ನೂ ಆನ್ಲೈನ್ ಆರ್ಡರ್ ಆನ್ಲೈನ್ ಪೇಮೆಂಟ್. ಹೀಗಾಗಿ ಆಗಾಗ ಮೋಸ ಹೋಗುವ ಘಟನೆಗಳು ನಡೆಯುತ್ತವೆ. ಕೊಚ್ಚಿಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಮೋಸ ಹೋಗಿದ್ದಾರೆ.
ಅಮೆಜಾನ್ ಜಾಲತಾಣದಲ್ಲಿ ಏಸರ್ ಕಂಪನಿಯ ಹೈ ಎಂಡ್ ಲ್ಯಾಪ್ ಟಾಪ್ ಆರ್ಡರ್ ಮಾಡಿದ್ದಾರೆ. ಅದರ ಬೆಲೆ 1.14 ಲಕ್ಷ ಆಗಿದ್ದು, ಅದನ್ನು ಮೊದ್ಲೇ ಪೇ ಮಾಡಿದ್ದಾಳೆ. ಮನೆಗೆ ಬಂದ ಬಾಕ್ಸ್ ತೆಗೆದು ನೋಡಿದೆ ಆಕೆಗೆ ಶಾಕ್ ಆಗಿದೆ. ಯಾಕಂದರೆ, ಬಾಕ್ಸ್ ನಲ್ಲಿ ಕಾಗದದ ಚೂರು ಹಾಗೂ ರಟ್ಟಿನ ತುಣುಕುಗಳು. ಅಮೆಜಾನ್ ಕಸ್ಟಮರ್ ಕೇರ್ ನಲ್ಲಿ ದೂರು ಸಲ್ಲಿಸಿದ್ದಾಳೆ. ಆದರೂ ಸಮಸ್ಯೆ ಬಗೆಹರಿದ್ದಾರೆ.
ದೊಡ್ಡ ಮೊತ್ತದ ಲ್ಯಾಪ್ ಟಾಪ್ ಖರೀದಿ ಮಾಡಿದ ಯುವತಿ, ಅದನ್ನು ತೆಗೆಯುವ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಇದಕ್ಕಾಗಿ ಯುಟ್ಯೂಬ್ ನಲ್ಲಿ ಅನ್ ಬಾಕ್ಸಿಂಗ್ ಅನ್ನೋ ವಿಡಿಯೋ ಪ್ರಕಾರವಿದೆ. ಈ ಮೂಲಕ ಅದನ್ನು ವೀಕ್ಷರಿಗೆ ತೋರಿಸಲಾಗುತ್ತೆ. ಹೀಗೆ ಮಾಡುತ್ತಿದ್ದ ಯುವತಿಯ ಇದೇಗ ಕಂಗಾಲಾಗಿದ್ದಾಳೆ.