ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದ್ರೆ, ಲಾರಿ ಚಾಲಕನ ದುಷ್ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಅಪಘಾತವಾದಾಗ ಬೈಕ್ ಸವಾರ ಲಾರಿಯ ಕಿಟಕಿ ಹಿಡಿದು ನಿಂತುಕೊಂಡಿದ್ದಾನೆ. ಆದರೆ, ಗಾಡಿ ನಿಲ್ಲಿಸದೆ ಬೈಕ್ ಎಳೆದುಕೊಂಡೇ ಮುಂದೆ ಸಾಗಿದ್ದಾನೆ. ಇತರೆ ವಾಹನ ಸವಾರರು ಗಾಡಿ ನಿಲ್ಲಿಸಲು ಹೇಳಿದರೂ ನಿಲ್ಲಿಸದೆ ಮತ್ತಷ್ಟು ವೇಗದಿಂದ ತೆಗೆದುಕೊಂಡು ಹೋಗಿದ್ದಾನೆ. ಇದರ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಲಾರಿ ಚಾಲಕನ ವಿರುದ್ಧ ದೂರು ದಾಖಲಾಗಿದೆ.