ದೇಶದಲ್ಲಿ 60 ಸಾವಿರಕ್ಕೂ ಕಡಿಮೆ ಸೋಂಕು

234

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ 60 ಸಾವಿರಕ್ಕೂ ಕಡಿಮೆ ಸೋಂಕಿತರು ಕಂಡು ಬಂದಿದ್ದಾರೆ. ಕಳೆದ 24 ಗಂಟೆಯಲ್ಲಿ 58,419 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಇಲ್ಲಿಯವರೆಗೂ 2,98,81,965 ಜನರಲ್ಲಿ ಸೋಂಕು ದೃಢಪಟ್ಟಿದೆ.

ದೇಶದಲ್ಲಿ ಇನ್ನು 7,29,243 ಪ್ರಕರಣಗಳು ಸಕ್ರಿಯವಾಗಿವೆ. ಕಳೆದೊಂದು ದಿನದಲ್ಲಿ 1,576 ಜನರು ಪ್ರಾಣ ಕಳೆದುಕೊಂಡಿದ್ದು ಸಾವಿನ ಸಂಖ್ಯೆ 3,86,713ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೂ 2,87,66,009 ಜನರು ಗುಣಮುಖರಾಗಿದ್ದಾರೆ. ದೇಶ್ಯಾದ್ಯಂತ 27,66,93,572 ಜನರಿಗೆ ಲಸಿಕೆ ಹಾಕಲಾಗಿದೆ.




Leave a Reply

Your email address will not be published. Required fields are marked *

error: Content is protected !!