ಸಿಂದಗಿ-ರಾಂಪೂರ ರಸ್ತೆಯಲ್ಲಿ ಅಪಘಾತ: ಮೂವರಿಗೆ ಗಂಭೀರ ಗಾಯ

875

ಸಿಂದಗಿ: ಪಟ್ಟಣದ ಸಿಂದಗಿ-ರಾಂಪೂರ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಒಂದು ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಶರಣಪ್ಪ ಲವಪ್ಪ ಚಂದ್ರಪ್ಪಗೋಳ, ಬೋರಮ್ಮ ಲಕ್ಷ್ಮಣ ಕಪ್ಪಣವರ ಹಾಗೂ ಪ್ರಭು ಸಿದ್ದಪ್ಪ ಪೂಜಾರಿ ಎಂಬುವವರಿಗೆ ಗಾಯಗಳಾಗಿವೆ.

ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಯ್ತು

ಗಾಯಾಳುಗಳನ್ನ ತಕ್ಷಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯ್ತು. ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ದೇಶಂಪುರಕ್ಕೆ ಕಳುಹಿಸಿಕೊಡಲಾಗಿದೆ.

ಮೂವರಿಗೆ ಕೈ ಕಾಲುಗಳಿಗೆ ಗಾಯಗಳಾಗಿವೆ. ದೇಶಪುರಂ ಕಳಸಲಾಗಿದೆ. ಒಂದು ಹುಡ್ಗನಿಗೆ ತಲೆಗೆ ಗಾಯವಾಗಿದೆ. ಟಿಪ್ಪರ್ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ. ಏನಾಗಿದೆ ಅನ್ನೋದು ಸರಿಯಾಗಿ ಗೊತ್ತಿಲ್ಲ.

ದತ್ತಾತ್ರೇಯ ಯಡಗಿ, ಸ್ಥಳೀಯರು

ಹಿಕ್ಕನಗುತ್ತಿ ಗ್ರಾಮದ ಶರಣಪ್ಪ, ಸಹೋದರಿ ಬೋರಮ್ಮ ಸಿಂದಗಿಯಿಂದ ಗ್ರಾಮಕ್ಕೆ ಹೊರಟಿದ್ದಾರೆ. ರಾಂಪೂರ ಕಡೆಯಿಂದ ಪ್ರಭು ಪೂಜಾರಿ ಅನ್ನೋ ಯುವಕ ಬರ್ತಿದ್ದ ಟೈಂನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಅಂತಾ ಹೇಳಲಾಗ್ತಿದೆ. ಇದರಲ್ಲಿ ಯಾರ ತಪ್ಪಿದೆ ಅನ್ನೋದು ತಿಳಿದು ಬಂದಿಲ್ಲ. ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!