ಮದುವೆ ಮನೆ ಹೊತ್ತಿ ಉರಿಯುತ್ತಿದ್ದರೆ ಆರಾಮಾಗಿ ಊಟ ಮಾಡಿದ ಅತಿಥಿಗಳು..

270

ಪ್ರಜಾಸ್ತ್ರ ಸುದ್ದಿ

ಮುಂಬೈ: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದು ಏನಂದರೆ, ಮದುವೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯುತ್ತಿದ್ದರೆ ಕೆಲ ಅತಿಥಿಗಳು ಆರಾಮಾಗಿ ಊಟ ಮಾಡಿದ್ದಾರೆ. ಥಾಣೆಯ ಭಿವಂಡಿಯಲ್ಲಿ ಭಾನುವಾರ ಸಂಜೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಅನ್ಸಾರಿ ಮದುವೆ ಮಂಟಪದಲ್ಲಿ ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತು ಉರಿಯಲು ಪ್ರಾರಂಭಿಸಿದೆ. ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿಕೊಳ್ಳುತ್ತಿದೆ. ಆದರೆ, ಕೆಲವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!