ಅಬ್ಬರಿಸಿದ ಟೀಂ ಇಂಡಿಯಾ.. ಲಂಕಾಗೆ 358 ರನ್ ಟಾರ್ಗೆಟ್

173

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮುಂಬೈ: ಇಲ್ಲಿನ ವಾಂಖಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 33ನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಕದನ ನಡೆಸಿವೆ. ಟಾಸ್ ಗೆದ್ದ ಶ್ರೀಲಂಕಾ ನಾಯಕ ಕುಶಾಲ್ ಮೆಂಡಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದನ್ನು ಟೀಂ ಇಂಡಿಯಾ ಭರ್ಜರಿಯಾಗಿ ಬಳಸಿಕೊಂಡಿತು.

ಶುಭನಂ ಗಿಲ್ 92, ವಿರಾಟ್ ಕೊಹ್ಲಿ 88, ಶ್ರೇಯಸ್ ಅಯ್ಯರ್ 82 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ 8 ವಿಕೆಟ್ ನಷ್ಟಕ್ಕೆ 357 ರನ್ ಕಲೆ ಹಾಕಿದೆ. 8 ರನ್ ಗಳಿಂದ ಗಿಲ್ ಶತಕ ವಂಚಿತರಾದರು. ಲಂಕಾ ಪರ ದಿಲ್ಶಾನ್ ಮಧುಶಂಖಾ ಭರ್ಜರಿ 5 ವಿಕೆಟ್ ಪಡೆದು ಮಿಂಚಿದರು. ಚಾಮೆರಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!