ಗವಿಮಠದಲ್ಲಿ 100 ಆಕ್ಸಿಜನ್ ಬೆಡ್ ಕೋವಿಡ್ ಆಸ್ಪತ್ರೆ ಶುರು

245

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಜಿಲ್ಲಾಡಳಿತದ ಸಹಕಾರದೊಂದಿಗೆ ಗವಿಮಠದಲ್ಲಿ 100 ಆಕ್ಸಿಜನ್ ಬೆಡ್ ಗಳ ಕೋವಿಡ್ ಆಸ್ಪತ್ರೆಯನ್ನ ಮಂಗಳವಾರ ಉದ್ಘಾಟನೆ ಮಾಡಲಾಗಿದೆ. ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ.ಮಹೇಶ ಅವರು ಆಸ್ಪತ್ರೆ ಉದ್ಘಾಟಿಸಿದ್ರು.

ಸೋಂಕಿತರಿಗೆ ಬೇಕಾದ ಮಂಚ, ಬೆಡ್ ಸೇರಿದಂತೆ ಮೂಲ ಸೌಕರ್ಯ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಮಠದ ಆರ್ಯುವೇದ ವೈದ್ಯರು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆಕ್ಸಿಜನ್ ಅಳವಡಿಕೆಯನ್ನ ಜಿಲ್ಲಾಡಳಿತ ಮಾಡ್ತಿದೆ.

ಈ ವೇಳೆ ಗವಿಸಿದ್ಧೇಶ್ವರ ಸ್ವಾಮೀಜಿ, ಶಾಸಕರಾದ ಅಮರೆಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಸಂಸದ ಸಂಗಣ್ಣ ಕರಡಿ ಸೇರಿದಂತೆ ಹಲವರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!