2020ರ ಅನುಭವ, 2021ರ ಅಭಿಪ್ರಾಯ ಕೇಳಿದ ಮೋದಿ

294

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಂದ 2020ನೇ ವರ್ಷದ ಅಭಿಪ್ರಾಯವನ್ನ ಕೇಳಿದ್ದಾರೆ. ಡಿಸೆಂಬರ್ 27ರಂದು ಮನ್ ಕೀ ಬಾತ್ ಕಾರ್ಯಕ್ರಮ ಈ ವರ್ಷದ ಕೊನೆಯದು. ಹೀಗಾಗಿ ಅಷ್ಟರೊಳಗೆ ತಮ್ಮ ಅಭಿಪ್ರಾಯ ತಿಳಿಸಲು ಹೇಳಿದ್ದಾರೆ.

ಕರೋನಾ ಲಾಕ್ ಡೌನ್ ನಿಂದಾ ಈ ವರ್ಷ ಇಡೀ ವಿಶ್ವದ ಜನರ ಬದುಕನ್ನ ಕಸಿದುಕೊಂಡಿದೆ. ಸಂಕಟದಲ್ಲೇ ದಿನಗಳನ್ನ ಕಳೆದಿರುವ ಜನರು, ಈ ವರ್ಷದ ಅನುಭವ ಹಾಗೂ ಮುಂದಿನ ವರ್ಷ ಹೇಗೆ ಇರಬೇಕು ಅನ್ನೋದನ್ನ ಮೈಗವ್ ನಮೋ ಆ್ಯಪ್(MyGov NaMo APP) ಕಳಿಸಬಹುದು. ಇಲ್ಲವೇ 1800-11-7800 ನಂಬರ್ ಗೂ ಆಡಿಯೋ ಅಭಿಪ್ರಾಯ ಸಲ್ಲಿಸಬಹುದು ಎಂದು ಟ್ವೀಟರ್ ಮೂಲಕ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!