ಕರೋನಾ ಕಾರ್ಮೋಡ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

221

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಣ್ಣಿಗೆ ಕಾಣದ ಕರೋನಾ ವೈರಸ್ ಸೃಷ್ಟಿಸಿದ ಅವಾಂತರ ಯಾರೂ ಊಹಿಸದಷ್ಟಿದೆ. ಇಡೀ ವಿಶ್ವವನ್ನು ತಲ್ಲಣಗೊಳಿಸಿದ ಈ ಸೋಂಕು, ಕಳೆದ ಎರಡು ವರ್ಷಗಳಿಂದ ಎಲ್ಲರ ಬದುಕು ಕಸೆದುಕೊಂಡಿದೆ. ಅದರಿಂದ ಇಂದಿಗೂ ಹೊರ ಬರಲಾಗಿದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದು, ಅದಕ್ಕೆ ಬೆಂಗಳೂರು ಗ್ರಾಮಾಂತರದಲ್ಲಿ ನಡೆದ ಈ ಘಟನೆ ಸಾಕ್ಷಿ.

ಬೆಂಗಳೂರು ಉತ್ತರ ತಾಲೂಕು ತೋಟದ ಗುಡ್ಡದಹಳ್ಳಿಯ ಪ್ರಕೃತಿ ಲೇಔಟ್ ನಿವಾಸಿಗಳಾದ ವಸಂತಾ(40) ಮಗಳು ನಿಶ್ವಿತಾ(6) ಹಾಗೂ ಮಗ ಯಶ್ವಂತ್(15) ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಒಂದು ಕೋಣೆಯಲ್ಲಿ ಮಗ ಇನ್ನೊಂದು ಕೋಣೆಯಲ್ಲಿ ತಾಯಿ ಹಾಗೂ ಮಗಳು ಒಂದೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಸಂತಾ ಪತಿ ಪ್ರಸನ್ನಕುಮಾರ್ ಬಿಎಂಟಿಸಿಯಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಅವರು ಕರೋನಾ ಸೋಂಕಿನಿಂದಾಗಿ ಆಗಸ್ಟ್ 7, 2020ರಲ್ಲಿ ಮೃತಪಟ್ಟಿದ್ದರು. ಇದರಿಂದಾಗಿ ಇಡೀ ಕುಟುಂಬ ಸಾಕಷ್ಟು ಸಂಕಷ್ಟು ಎದುರಿಸುತಿತ್ತು. ಮನೆ ನಿರ್ಮಾಣಕ್ಕಾಗಿ 20 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಅದರ ಬಡ್ಡಿ ಕಟ್ಟಲು ಸಹ ಆಗುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ತಾಯಿ ತನ್ನೆರಡು ಮಕ್ಕಳೊಂದಿಗೆ ನೇಣಿಗೆ ಶರಣಾಗಿರುವ ದುರಂತ ನಡೆದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!