ದೇಶದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ.96.92

270

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಹೀಗಾಗಿ 3ನೇ ಅಲೆ ಬರದಂತೆ ಮಾಡಬೇಕಾಗಿದೆ. ಇದೀಗ ಸೋಂಕಿತರ ಚೇತರಿಕೆ ಪ್ರಮಾಣ ಶೇಕಡ 96.92ರಷ್ಟು ಇದೆ. ಹೀಗಾಗಿ ಜನರಿಗೆ ಸಾಕಷ್ಟು ಸಮಾಧಾನವಾಗಿದೆ.

ಕಳೆದ 24 ಗಂಟೆಯಲ್ಲಿ 45,951 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ 3,03,62,848ಕ್ಕೆ ಏರಿಕೆಯಾಗಿದೆ. ಇನ್ನು 5,37,064 ಪ್ರಕರಣಗಳು ಸಕ್ರಿಯವಾಗಿವೆ. 2,94,27,330 ಜನರು ಚೇತರಿಸಿಕೊಂಡಿದ್ದಾರೆ.

ಒಂದೇ ದಿನದಲ್ಲಿ 817 ಜನರು ದೇಶ್ಯಾದ್ಯಂತ ಸಾವನ್ನಪ್ಪಿದ್ದಾರೆ. 3,98,454ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. 60,729 ಜನರು ಒಂದೇ ದಿನದಲ್ಲಿ ಡಿಸ್ಚಾರ್ಜ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!