ತೂಕ ಕಡಿಮೆ ಮಾಡುವ ವಿಚಿತ್ರ ಸಾಧನ!

328

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ದೇಹದ ತೂಕ ಇಳಿಸಿಕೊಳ್ಳಲು ಜನರು ಹಲವು ರೀತಿಯ ಪ್ರಯತ್ನಗಳನ್ನ ಮಾಡುತ್ತಾರೆ. ಜಿಮ್ ಗೆ ಹೋಗ್ತಾರೆ. ವ್ಯಾಯಾಮ ಮಾಡ್ತಾರೆ. ಡಯಟ್ ಮಾಡ್ತಾರೆ. ಯೋಗದ ಮೊರೆ ಹೋಗ್ತಾರೆ. ಅಲ್ದೇ, ಔಷಧಿ, ಮಾತ್ರೆ ಸೇರಿದಂತೆ ಮಾರುಕಟ್ಟೆಯಲ್ಲಿ ಸಿಗುವ ಸ್ಲಿಮ್ ಗೆ ಸಂಬಂಧಿಸಿದ ವಸ್ತುಗಳನ್ನ ಖರೀದಿ ಮಾಡುತ್ತಾರೆ.

ಇದೆಲ್ಲದರ ನಡುವೆ ಡೆಂಟಲ್ ಸ್ಲಿಮ್ ಕಂಟ್ರೋಲ್ ಹೆಸರಿನ ಸಾಧನವನ್ನ ನ್ಯೂಜಿಲೆಂಡ್ ನ ಒಟಾಗೋ ವಿಶ್ವವಿದ್ಯಾಲಯದ ತಂಡವನ್ನ ಅಭಿವೃದ್ಧಿ ಪಡಿಸಿದೆ. ಇದನ್ನ 7 ಜನ ಮಹಿಳೆಯರ ಮೇಲೆ ಪ್ರಯೋಗ ಮಾಡಲಾಗಿದ್ದು, ಒಂದು ವಾರ ಬರೀ ದ್ರವ ರೂಪದ ಆಹಾರ ಸೇವನೆ ಮಾಡಿದ್ದಾರೆ. ಕೊನೆಗೆ ಅವರು ಶೇಕಡ 5.1ರಷ್ಟು ತೂಕ ಕಳೆದುಕೊಂಡಿದ್ದಾರೆ.

ಈ ಸಾಧನ ಆಯಸ್ಕಾಂತದಿಂದ ಕೂಡಿದೆ. ಮೇಲ್ಭಾಗ ಹಾಗೂ ಕೆಳಭಾಗದ ಹಲ್ಲುಗಳ ನಡುವೆ ಸೇರಿಸಲಾಗುತ್ತೆ. ಇದು ಸಕ್ರಿಯಗೊಳಿಸಿದಾಗ ವ್ಯಕ್ತಿಯ ಬಾಯಿ ಬಂದ್ ಆಗುತ್ತೆ. ಗಟ್ಟಿ ಪದಾರ್ಥಗಳನ್ನ ತಿನ್ನುವುದಿರಲಿ, ಮಾತ್ನಾಡಲು ಸಹ ಬರುವುದಿಲ್ಲ. ಈ ವಿಚಿತ್ರ ಆವಿಷ್ಕಾರದ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಹಲವು ಟೀಕೆಗಳು ಸಹ ಕೇಳಿ ಬಂದಿವೆ.




Leave a Reply

Your email address will not be published. Required fields are marked *

error: Content is protected !!