ಹಾಸನದಲ್ಲಿ ಶಾಲಾ ಬಾಲಕಿ ನಾಪತ್ತೆ

158

ಪ್ರಜಾಸ್ತ್ರ ಸುದ್ದಿ

ಹಾಸನ: ಏಳನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಣತಿಯಲ್ಲಿ ನಡೆದಿದೆ. 13 ವರ್ಷದ ನಂದಿತಾ ಎರಡು ವಾರಗಳಿಂದ ನಾಪತ್ತೆಯಾಗಿದ್ದಾಳೆ.

ವಸತಿ ನಿಲಯದಲ್ಲಿದ್ದುಕೊಂಡು ಅಣತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಆದರೆ, ನಾನು ಹಾಸ್ಟೇಲ್ ಗೆ ಹೋಗುವುದಿಲ್ಲವೆಂದು ಗ್ರಾಮದ ಯುವಕ ಗಿರೀಶ್ ಎಂಬಾತನ ಮೊಬೈಲ್ ನಿಂದ ಪೋಷಕರಿಗೆ ಕರೆ ಮಾಡಿ ಹೇಳಿದ್ದಾಳಂತೆ. ಪೋಷಕರು ಯುವಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ದೂರು ನೀಡಿದ್ದಾರೆ. ಬಾಲಕಿ ಪತ್ತೆಯ ಬಳಿಕವೇ ಸತ್ಯ ಹೊರ ಬರಲಿದೆ.




Leave a Reply

Your email address will not be published. Required fields are marked *

error: Content is protected !!