ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಯುಗಾದಿ ಹಬ್ಬಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಟೀಸರ್ ಗಿಪ್ಟ್ ನೀಡಲಾಗಿದೆ. ಯೆಸ್, ಇಂದು ಬೆಳಗ್ಗೆ ವಿಕ್ರಾಂತ್ ರೋಣ ಚಿತ್ರದ ಟೀಸರ್ ಬಹುಭಾಷೆಯಲ್ಲಿ ರಿಲೀಸ್ ಮಾಡಲಾಗಿದೆ.
ಅಜ್ಜ, ಅಜ್ಜಿ ಹೇಳುವ ಗುಮ್ಮನ ಕಥೆ ಶೈಲಿಯಲ್ಲಿ ಟೀಸರ್ ಇದ್ದು, ಕಥೆಯೊಳಗೊಂದು ಕಥೆ ಇರುವುದು ತಿಳಿಯುತ್ತೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರ 3ಡಿಯಲ್ಲಿ ಜುಲೈ 28ರಂದು ರಿಲೀಸ್ ಆಗುತ್ತಿದೆ. ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವಿಲಿನಾ ಫರ್ನಾಂಡಿಸ್ ಸೇರಿ ಅನೇಕರಿದ್ದಾರೆ.