ಸ್ವಯಂ ನಿವೃತ್ತಿ ಪಡೆದ ಭಾಸ್ಕರ್ ರಾವ್

471

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಪಡೆದಿದ್ದಾರೆ. 2019-20ರ ಅವಧಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಇವರು, ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2) ಅಡಿಯಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದಾರೆ.

ಭಾಸ್ಕರ್ ರಾವ್ ಅವರು ಸೆಪ್ಟಂಬರ್ 16, 2021ರಲ್ಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ನಿಯಮಗಳ ಪ್ರಕಾರ ಇದರ ಮರುಪರಿಶೀಲನೆಗೆ ಕೇಂದ್ರ ಗೃಹ ಸಚಿವಾಲಯ ಮೂರು ಕಾಲಾವಕಾಶ ನೀಡಿತ್ತು. ಆದರೆ, 6 ತಿಂಗಳಾದರೂ ಕೇಂದ್ರ ಗೃಹ ಸಚಿವಾಲಯದಿಂದ ಉತ್ತರ ಬರದ ಕಾರಣ, ಆಲ್ ಇಂಡಿಯಾ ಸರ್ವಿಸ್ ಆಕ್ಟ್ 16(2) ಅಡಿಯಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಐಪಿಎಸ್ ಆಕ್ಟ್ 16(2) ಪ್ರಕಾರ ಸ್ವಯಂ ನಿವೃತ್ತಿ ಪಡೆಯುವ ಅಧಿಕಾರಿಯ ವಯಸ್ಸು 50 ದಾಟಿರಬೇಕು. 20 ವರ್ಷ ಸೇವೆ ಪೂರ್ಣಗೊಳಿಸರಬೇಕು. ನಿವೃತ್ತಿಗೆ ಅರ್ಜಿ ಸಲ್ಲಿಸುವಾಗ ಅಧಿಕಾರಿ ಅಮಾನತಿನಲ್ಲಿರಬಾರದು. ಭಾಸ್ಕರ್ ರಾವ್ ಪ್ರಸ್ತುತ ರೈಲ್ವೆ ಪೊಲೀಸ್ ವಿಭಾಗದ ಎಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದರು.




Leave a Reply

Your email address will not be published. Required fields are marked *

error: Content is protected !!