ಪ್ರಜಾಸ್ತ್ರ ಸುದ್ದಿ
ಮಂಗಳೂರು: ವಿದ್ಯಾರ್ಥಿಗೆ ಉಪನ್ಯಾಸಕರೊಬ್ಬರು ಭಯೋತ್ಪಾದಕ ಎಂದು ಕರೆಯುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಘಟನೆ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಮುಸ್ಲಿಂ ಅನ್ನೋ ಕಾರಣಕ್ಕೆ ವಿದ್ಯಾರ್ಥಿಗೆ ಭಯೋತ್ಪಾದಕ ಎಂದ ಉಪನ್ಯಾಸಕರು ನಂತರ ಕ್ಷಮೆ ಕೇಳಿದ್ದಾರೆ. ನೀನು ನನ್ನ ಮಗನ ಸಮ ಎಂದು ಸಮಜಾಯಿಸಿ ನೋಡಲು ಹೋಗಿದ್ದಾರೆ. ನಿಮ್ಮ ಮಗನಿಗೂ ಹೀಗೆ ಕರೆಯುತ್ತಿದ್ದೀರಾ, ಇದು ತಮಾಷೆಯ ವಿಷಯ ಅಲ್ಲ. ನನಗೆ ಹೇಗೆ ಧರ್ಮದ ಆಧಾರದ ಮೇಲೆ ಭಯೋತ್ಪಾದಕ ಎಂದು ಕರೆದೀರಿ, ಇಷ್ಟು ಜನರ ಎದುರು, ಇಡೀ ಕ್ಲಾಸ್ ನಲ್ಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ.