ಖಾಸಗಿ ವಾಹಿನಿಯ ಐವರು ಪತ್ರಕರ್ತರಲ್ಲಿ ಕರೋನಾ ಸೋಂಕು

473

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಖಾಸಗಿ ವಾಹಿನಿಯೊಂದರ ಐವರು ಪತ್ರಕರ್ತರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಕ್ರೈಂ ವರದಿಗಾರರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರನ್ನ ಬಿಬಿಎಂಪಿ ಅಧಿಕಾರಿಗಳು, ಯಲಹಂಕ ಬಳಿಯ ಆಕಾಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಹೀಗೆ ಕರೆದುಕೊಂಡು ಹೋದ ಸೋಂಕಿತ ಪತ್ರಕರ್ತರಿಗೆ ಬೆಳಗ್ಗೆಯಿಂದ ಕುಡಿಯಲು ನೀರು ಕಡದೆ, ತಿಂಡಿ ಕೊಡದೆ ಆಂಬ್ಯುಲೆನ್ಸ್ ನಲ್ಲಿಯೇ ಕಾಯುವಂತೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ದೇ, ಸರಿಯಾಗಿ ಚಿಕಿತ್ಸೆ ನೀಡಲು ಸಹ ಹಿಂದೇಟು ಹಾಕ್ತಿದ್ದಾರೆ ಎಂದು ಹೇಳಲಾಗ್ತಿದೆ.

ಬೆಂಗಳೂರು ನಗರ ಕರೋನಾ ಹಾಟ್ ಸ್ಪಾಟ್ ಆಗಿದೆ. ಇದುವರೆಗೂ 3,341 ಜನರಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 105 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂ.ನಗರದಲ್ಲಿ 88 ಜನ, ಬೆಂ.ಗ್ರಾಮಾಂತರದಲ್ಲಿ 3 ಜನ ಸಾವನ್ನಪ್ಪಿದ್ದಾರೆ. ಹೀಗೆ ವ್ಯಾಪಕವಾಗಿ ಸೋಂಕು ಹರಡುತ್ತಿರುವುದರಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಿಯಾದ ವ್ಯವಸ್ಥೆಯಿಲ್ಲವೆಂದು ಹೇಳಲಾಗ್ತಿದೆ. ಇದರ ಎಫೆಕ್ಟ್ ಹಗಲು ರಾತ್ರಿ ಸಮಾಜದ ಪರವಾಗಿ ಕೆಲಸ ಮಾಡುವ ಪತ್ರಕರ್ತರಿಗೂ ಆಗ್ತಿದೆ. ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೀಗಿರುತ್ತೆ ಅನ್ನೋ ಪ್ರಶ್ನೆ ಮೂಡಿದೆ.

ಇಂದು ಬೆಳಗ್ಗೆಯೇ ಕೋವಿಡ್ 19 ಸೋಂಕಿತ ವೃದ್ಧೆ ಆಂಬ್ಯುಲೆನ್ಸ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಇದೆ ಪರಿಸ್ಥಿತಿ ಮುಂದುವರೆದ್ರೆ ಸಿಲಿಕಾನ್ ಸಿಟಿ ಕರೋನಾ ಸಿಟಿಯಾಗುವುದರಲ್ಲಿ ಡೌಟೇ ಇಲ್ಲ.




Leave a Reply

Your email address will not be published. Required fields are marked *

error: Content is protected !!