ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇಂಡಿಯಾ ಮೈತ್ರಿಕೂಟ ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರೊಂದಗಿನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ. ಈ ಮೂಲಕ 14 ಪತ್ರಕರ್ತರನ್ನು ಬಹಿಷ್ಕರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸುತ್ತಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಸಿಎಂ ಸಿದ್ದರಾಮಯ್ಯ, ಮಾನ್ಯ ಜೆಪಿ ನಡ್ಡಾ ಅವರೆ ಮಾಧ್ಯಮಗಳ ಮೇಲಿನ ನೈಜ ದಾಳಿಗಳ ಪಟ್ಟಿ ನಾವು ಕೊಡುತ್ತೇವೆ. ಇದನ್ನೆಲ್ಲ ನೀವು ಮರೆತಿರಬಹುದು, ಆದರೆ ಇಂಡಿಯಾ ಮರೆತಿಲ್ಲ. ಸತ್ಯದ ವರದಿ ಮಾಡಿದ್ದಕ್ಕಾಗಿ ಬಂಧನಕೊಳ್ಳಗಾದ ಪತ್ರಕರ್ತರು ಎಂದು ಸಿದ್ದಿಕ್ ಕಪ್ಪನ್, ಮೊಹಮ್ಮದ್ ಝುಬೇರ್, ಅಜಿತ್ ಓಝಾ, ಜಸ್ಪಾಲ್ ಸಿಂಘ್, ಸಜದ್ ಗುಲ್ ಎಂದು ಬರೆದಿದ್ದಾರೆ.

ಜೊತೆಗೆ ಸತ್ಯದ ದನಿಯಾಗಿ ನಿಂತಿದ್ದಕ್ಕೆ ಮೋದಿ ಆಡಳಿತದಲ್ಲಿ ಕೊಲೆಯಾದ ಪತ್ರಕರ್ತರು ಎಂದು ಹೇಳಿ, ರಾಕೇಶ್ ಸಿಂಗ್, ಶುಭಂ ಮಣಿ ತ್ರಿಪಾಠಿ, ಜೆ.ಮೋಸೆಸ್, ಪರಾಗ್ ಭುಯಾನ್, ಗೌರಿ ಲಂಕೇಶ್ ಎಂದಿದ್ದಾರೆ. 2015ರಿಂದ ಪತ್ರಿಕಾ ಸ್ವಾತಂತ್ರ್ಯ ಅವಸಾನದತ್ತ ಸಾಗಿದ್ದು, ಜಗತ್ತಿನಲ್ಲಿ 2015ರಲ್ಲಿ 136ನೇ ಸ್ಥಾನದಲ್ಲಿತ್ತು. 2023ರಲ್ಲಿ 161ನೇ ಸ್ಥಾನಕ್ಕೆ ಬಂದಿದೆ. ಪಕ್ಷವೊಂದು ಸುದ್ದಿ ಮಾಧ್ಯಮಕ್ಕೆ ಬರುವುದಿಲ್ಲ, ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿದ್ದು ನಿಜವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಸುದೀರ್ಘವಾಗಿ ವಾಗ್ದಾಳಿ ನಡೆಸಿದ್ದಾರೆ.