ಭಾರತ ಫೈನಲ್ ಗೆ ಹೋದರೆ ಉಳಿದ ಪಂದ್ಯಗಳಲ್ಲಿ ಸೋಲೋದ್ಯಾಕೆ?

160

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ ಟೂರ್ನಿಯ ಸೂಪರ್ 4ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಆಡಿದ ಶುಕ್ರವಾರ ಆಡಿದ ಪಂದ್ಯದಲ್ಲಿ ಕೇವಲ 6 ರನ್ ಗಳಿಂದ ಸೋತಿದೆ. 265 ರನ್ ಗಳ ಗುರಿಯನ್ನು ಮುಟ್ಟುವಲ್ಲಿ ವಿಫಲವಾದ ರೋಹಿತ್ ಶರ್ಮಾ ಪಡೆ 259 ರನ್ ಗಳಿಗೆ ಆಲೌಟ್ ಆಗಿದೆ. ಹೀಗಾಗಿ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಈ ಒಂದು ಪ್ರಶ್ನೆ ಸದಾ ಕಾಡುತ್ತಿದೆ.

ಯಾವುದೇ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿತು ಅಂದರೆ, ಉಳಿದ ಪಂದ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅನುಭವಿಗಳಿಗೆ ವಿಶ್ರಾಂತಿ ನೀಡಿ, ಹೊಸಬರಿಗೆ ಅವಕಾಶ ನೀಡುತ್ತೆ. ಅಲ್ಲಿ ಯಶಸ್ಸು ಸಾಧಿಸಿದಕ್ಕಿಂತ ವಿಫಲವಾಗಿದ್ದೇ ಹೆಚ್ಚು. ಇದೀಗ ಏಷ್ಯ ಕಪ್ ಫೈನಲ್ ಗೆ ಹೋಗಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಸೋತಿದ್ದು ಮತ್ತೊಂದು ಉದಾಹರಣೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ ಲೆಕ್ಕಾಚಾರವನ್ನು ಬೌಲರ್ ಗಳು ಸರಿ ಮಾಡಲು ಹೋದರೆ, ಉಳಿದ ಆಟಗಾರರು ಅದನ್ನು ತಪ್ಪಿಸಿದ್ದೆ ಹೆಚ್ಚು. ಒಂದೇ ಓವರ್ ನಲ್ಲಿ ಎರಡೆರಡು ಕ್ಯಾಚ್ ಗಳನ್ನು ಬಿಡುವ ಮೂಲಕ ಬಾಂಗ್ಲಾ ಆಟಗಾರರಿಗೆ ಜೀವದಾನ ಮಾಡಿದರು. ಹೀಗಾಗಿ ಶಕೀಬ್ ಅಲ್ ಹಸನ್ 80, ತೌವಿದ್ 54, ನಸುಮ್ ಅಹ್ಮದ್ 44 ರನ್ ಗಳಿಸಿದರು.

ನಂತರ ಬ್ಯಾಟ್ ಮಾಡಿದ ಭಾರತ ಶುಭನಂ ಗಿಲ್ ಭರ್ಜರಿ 121 ರನ್ ಗಳ ಆಟದ ಹೊರತಾಗಿಯೂ ಭಾರತ ಸೋಲಲು ಕಾರಣ, ಬ್ಯಾಟಿಂಗ್ ನಲ್ಲಿಯೂ ವಿಫಲರಾಗಿದ್ದರು. ನಾಯಕ ರೋಹಿತ್ 0, ತಿಲಕ್ ವರ್ಮಾ 5, ಕೆ.ಎಲ್ ರಾಹುಲ್ 19, ಸೂರ್ಯಕುಮಾರ್ ಯಾದವ್ 26 ರನ್ ಗಳಿಸಿ ಔಟ್ ಆದರು. ಅಕ್ಷರ್ ಪಟೇಲ್ 42 ರನ್ ಗಳಿಸಿ ಗಿಲ್ ಗೆ ಸಾಥ್ ಕೊಟ್ಟರೂ ಪಂದ್ಯ ಸೋಲಬೇಕಾಯಿತು. ಫೈನಲ್ ಗೆ ಹೋದರೆ ಉಳಿದ ಪಂದ್ಯಗಳಲ್ಲಿ ಬೇಜವಾಬ್ದಾರಿ ಆಟವಾಡುತ್ತಾರೆ ಎಂದು ಕ್ರೀಡಾ ಪ್ರೇಮಿಗಳು ಕಿಡಿ ಕಾರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!