ಇಂಡಿಯಾ-ಶ್ರೀಲಂಕಾ ಫೈನಲ್ ಕದನ

312

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ 2023 ಯಾರ ಪಾಲಿಗೆ ಅನ್ನೋ ಕುತೂಹಲ ಮೂಡಿದೆ. ಭಾನುವಾರ ಭಾರತ ಹಾಗೂ ಶ್ರೀಲಂಕಾ ನಡುವೆ ಫೈನಲ್ ಕದನ ನಡೆಯಲಿದೆ. ಪ್ರೇಮದಾಸ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ.

ಹಿಂದಿನ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಸೋತಿದೆ. ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಗೆದ್ದು ಜೋಶ್ ನಲ್ಲಿದೆ. ತವರು ನೆಲದಲ್ಲಿ ಕಪ್ ಗೆದ್ದು ಬೀಗಬೇಕೆಂದು ಲಂಕಾ ಪಡೆ ಸಜ್ಜಾಗಿದೆ. ಬಲಿಷ್ಠ ಭಾರತ ಸಿಂಹಳಿಯರನ್ನು ಸೋಲಿಸಿ 8ನೇ ಬಾರಿಗೆ ಏಷ್ಯ ಕಪ್ ಮುಡಿಗೇರಿಸಿಕೊಳ್ಳಲು ಪಣ ತೊಟ್ಟಿದೆ.

1984ರಲ್ಲಿ ಏಷ್ಯ ಕಪ್ ಶುರುವಾಗಿದೆ. ಅಂದು ಸಹ ಭಾರತ-ಲಂಕಾ ಫೈನಲ್ ನಲ್ಲಿ ಕಾದಾಟ ನಡೆಸಿದ್ದು, ಭಾರತ ಕಪ್ ಗೆದ್ದಿತ್ತು. ಲಂಕಾ ರನರ್ ಅಪ್ ಆಗಿತ್ತು. 1986ರಲ್ಲಿ ಶ್ರೀಲಂಕಾ ಏಷ್ಯ ಕಪ್ ಗೆದ್ದಿತು. 1998, 91, 95ರಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಪ್ರತಿ ಬಾರಿಯೂ ಲಂಕಾ ವಿರುದ್ಧವೇ ಜಯ ಸಾಧಿಸಿದೆ. 7 ಬಾರಿ ಏಷ್ಯ ಕಪ್ ಭಾರತ ಎತ್ತಿ ಹಿಡಿದಿದೆ. 6 ಬಾರಿ ಶ್ರೀಲಂಕಾ ಗೆದ್ದಿದೆ. ಹೀಗಾಗಿ ಫೈನಲ್ ಕದನ ಸಾಕಷ್ಟು ಕುತೂಹಲ ಮೂಡಿಸಿದೆ.

ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಗಿಲ್, ಕೊಹ್ಲಿ ಕೆ.ಎಲ್ ರಾಹುಲ್ ಅಬ್ಬರ ನಾಳೆ ಹೇಗಿರುತ್ತೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಧುಷನ್ ಶಂಕಾ ಪಡೆಯನ್ನು ಕಟ್ಟಿ ಹಾಕಲು ಬೂಮ್ರಾ, ಕುಲದೀಪ್ ಯಾದವ್, ಜಡೇಜಾ, ಶೆಮಿ, ಸಿರಾಜ್, ಪ್ರಸಿದ್ಧ ಕೃಷ್ಣ ತಯಾರಾಗಿದ್ದಾರೆ. ಒಟ್ಟಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಸೂಪರ್ ಸಂಡೇ ಫಿಕ್ಸ್.




Leave a Reply

Your email address will not be published. Required fields are marked *

error: Content is protected !!