ಖಾಸಗಿ ವಾಹಿನಿಯ ಕ್ಯಾಮೆರಾಮನ್ ಸೂಸೈಡ್

464

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ರೈಲಿಗೆ ತಲೆ ಕೊಟ್ಟು ಖಾಸಗಿ ನ್ಯೂಸ್ ಚಾನೆಲ್‌ವೊಂದರ ಕ್ಯಾಮರಮನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 42 ವರ್ಷದ ಹನುಮಂತರಾವ ಆತ್ಮಹತ್ಯೆ ಮಾಡಿಕೊಂಡ ಕ್ಯಾಮೆರಾಮನ್ ಆಗಿದ್ದಾರೆ.

ಕಲಬುರಗಿ ಹೊರವಲಯದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲು ಹಳಿ ಮೇಲೆ ಈ ಘಟನೆ ನಡೆದಿದೆ. ಮೃತ ಹನುಮಂತರಾವ ಕಲಬುರಗಿ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸ್ತಿದ್ರು. ವೈಯುಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ. ಹಣಮಂತರಾವ ಅವರ ಆತ್ಮಹತ್ಯೆಯಿಂದ ಅವರ ಸಹೋದ್ಯೋಗಿಗಳಿಗೆ ಶಾಕ್ ಆಗಿದೆ.




Leave a Reply

Your email address will not be published. Required fields are marked *

error: Content is protected !!