ದುನಿಯಾ ವಿಜಿಗೆ ಶುಭಾಶಯಗಳ ಸುರಿಮಳೆ

273

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಬ್ಲ್ಯಾಕ್ ಕೋಬ್ರಾ ಖ್ಯಾತಿಯ ನಟ ದುನಿಯಾ ವಿಜಿಗೆ ಇಂದು 47ರ ಸಂಭ್ರಮ. 1974, ಜನವರಿ 20ರಂದು ಜನಿಸಿದ ನಟ ದುನಿಯಾ ವಿಜಿ 47ನೇ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದು, ಎಲ್ಲಡೆಯಿಂದ ಶುಭಾಶಯಗಳು ಸುರಿಮಳೆಯಾಗ್ತಿದೆ.

ಸಾಕಷ್ಟು ಸಣ್ಣಪುಟ್ಟ ಪಾತ್ರಗಳಲ್ಲಿ, ಫೈಟಿಂಗ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದ ವಿಜಯಗೆ ತಿರುವು ಕೊಟ್ಟಿದ್ದು ದುನಿಯಾ ಸಿನಿಮಾ. 2007ರಲ್ಲಿ ಸೂರಿ ನಿರ್ದೇಶನದಲ್ಲಿ ಬಂದ ದುನಿಯಾ ಚಿತ್ರ, ನಟ ವಿಜಯ ಲೈಫ್ ಚೇಂಜ್ ಮಾಡಿತು. ಅಲ್ಲಿಂದ ದುನಿಯಾ ವಿಜಿ ಆದ ನಟ, ಹಲವು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ರು.

ಇದೀಗ ನಿರ್ದೇಶನಕ್ಕೆ ಕೈ ಹಾಕಿರುವ ದುನಿಯಾ ವಿಜಿ, ಸಲಗ ಸಿನಿಮಾ ಮಾಡ್ತಿದ್ದಾರೆ. ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಸಲಗ ಮೂವಿ ನೋಡಲು ಅವರ ಅಭಿಮಾನಿಗಳು ತುದಿಗಾಲ ಮೇಲೆ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!