ವಿಜಿ ಹುಟ್ಟು ಹಬ್ಬಕ್ಕೆ ಬಂತು ‘ಭೀಮ’ ಟೀಸರ್

198

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಈಗ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ತೆಲುಗು ಸಿನಿ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಇಂದು ನಟ ವಿಜಯ್ ಅವರಿಗೆ 49ನೇ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ತಮ್ಮು ಹುಟ್ಟೂರಾದ ಆನೆಕಲ್ ತಾಲೂಕಿನ ಕುಂಬಾರನಹಳ್ಳಿಯಲ್ಲಿರುವ ತಮ್ಮ ತಂದೆ, ತಾಯಿ ಸಮಾಧಿ ಹತ್ತಿರು ಜನುಮ ದಿನ ಆಚರಿಸಿಕೊಳ್ಳುತ್ತಿದ್ದಾರೆ.

ಇನ್ನು ಹುಟ್ಟು ಹಬ್ಬದ ನಿಮಿತ್ತ ಅವರ ನಿರ್ದೇಶನ ಹಾಗೂ ನಟನೆಯ 2ನೇ ಚಿತ್ರ ‘ಭೀಮ’ದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದ್ದಾರೆ. ಸಲಗ ಚಿತ್ರದ ಬಳಿಕ ಮತ್ತೊಂದು ಮಾಸ್ ಮೂವಿ ರೆಡಿಯಾಗುತ್ತಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ ಸಹ ಅವರೆ ಮಾಡುತ್ತಿದ್ದಾರೆ. ಟೀಸರ್ ನೋಡಿದವರು ಭೀಮ ಮತ್ತೊಂದು ಲೆವಲ್ ಸಿನಿಮಾ ಅಂತಿದ್ದಾರೆ.

ಸಲಗ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದ ಚರಣ್ ರಾಜ್ ಮ್ಯೂಸಿಕ್ ಇಲ್ಲಿಯೂ ಮುಂದುವರೆದಿದೆ. ಕೃಷ್ಣ ಸಾರ್ತಕ, ಜಡೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!