ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

223

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗಣರಾಜ್ಯೋತ್ಸವ ನಿಮಿತ್ತ ಸಿಲಿಕಾನ್ ಸಿಟಿಯ್ಲಲಿರುವ ಲಾಲ್ ಬಾಗ್ ನಲ್ಲಿ ಪ್ರತಿ ವರ್ಷ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕೆ ಶುಕ್ರವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಾಲನೆ ನೀಡಿದರು. ಈ ವೇಳೆ ಸಚಿವ ಮುನಿರತ್ನ, ಎಂಎಲ್ಸಿ ಸರವಣ ಸೇರಿ ಇತರರು ಉಪಸ್ಥಿತರಿದ್ದರು.

ಇದು 213ನೇ ಫಲಪುಷ್ಪ ಪ್ರದರ್ಶನವಾಗಿದೆ. ಇಲ್ಲಿರುವ ಕಲ್ಲಿನ ಬಂಡೆ, ಬಸವಣ್ಣನ ಮೂರ್ತಿ, ರೋಮನ್ ಯುಗದ ನಾಣ್ಯಗಳ ಕಲಾಕೃತಿಗಳಿಗೆ 1,500 ವರ್ಷಗಳ ಇತಿಹಾಸವಿದೆ. ದೇಶ, ವಿದೇಶಗಳಿಂದ ವಿಶೇಷ ಹೂವುಗಳನ್ನು ತೆಗೆದುಕೊಂಡು ಬಂದು ವಿಶಿಷ್ಟವಾದ ಕಲಾಕೃತಿಗಳನ್ನು ನಿರ್ಮಿಸಲಾಗುತ್ತೆ.

11 ದಿನಗಳ ಕಾಲ ನಡೆಯು ಪುಷ್ಪ ಪ್ರದರ್ಶನವನ್ನು ನೋಡಲು ಲಕ್ಷಾಂತರು ಜನರು ಬರುತ್ತಾರೆ. ಸಾಮಾನ್ಯ ದಿನಗಳಲ್ಲಿ 70 ರೂಪಾಯಿ, ರಜಾ ದಿನಗಳಲ್ಲಿ 75 ರೂಪಾಯಿ, ಮಕ್ಕಳಿಗೆ 30 ರೂಪಾಯಿ ಟಿಕೆಟ್ ದರವಿದೆ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ.




Leave a Reply

Your email address will not be published. Required fields are marked *

error: Content is protected !!