ಮುನವಳ್ಳಿ ಪುರಸಭೆ ಚುನಾವಣೆ: ಶೇ.81ರಷ್ಟು ಮತದಾನ

447

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸವದತ್ತಿ ತಾಲೂಕಿನ ಮುನವಳ್ಳಿ ಪುರಸಭೆಯ 23 ವಾರ್ಡ್ ಗಳಿಗೆ ಇಂದು ಮತದಾನ ನಡೆದಿದೆ. ಶೇಕಡ 81.70ರಷ್ಟು ಮತದಾನ ನಡೆಯುವ ಮೂಲಕ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 15,980 ಮತದಾರರಲ್ಲಿ 13,055 ಜನರು ವೋಟ್ ಮಾಡಿದ್ದಾರೆ.

ಮುನವಳ್ಳಿ ಪುರಸಭೆ ಚುನಾವಣೆಯ ಕಣದಲ್ಲಿ 56 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಡಿಸೆಂಬರ್ 30ರಂದು ಫಲಿತಾಂಶ ಹೊರ ಬೀಳಲಿದೆ. ಅಂದು 56 ಅಭ್ಯರ್ಥಿಗಳ ಮುಂದಿನ ರಾಜಕೀಯ ಭವಿಷ್ಯ ತಿಳಿಯಲಿದೆ.




Leave a Reply

Your email address will not be published. Required fields are marked *

error: Content is protected !!