ಚಿಟಗುಪ್ಪದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ

186

ಪ್ರಜಾಸ್ತ್ರ ಸುದ್ದಿ

ಚಿಟಗುಪ್ಪ: ನಗರದ ಕನ್ಯಾ ಪ್ರಾಥಮಿಕ ಶಾಲಾ ಆವರಣದಲ್ಲಿ ಜಾನಪದ ಪರಿಷತ್ತು ಚಿಟಗುಪ್ಪ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ವಾಲ್ಮೀಕಿ ಫೋಟೋ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಜಾನಪದ ಪರಿಷತ್ ಅಧ್ಯಕ್ಷ ಸಂಗಮೇಶ ಎನ್.ಜವಾದಿ, ಸಾಮಾಜಿಕ ಮೌಲ್ಯಗಳ ಪ್ರತಿಪಾದಕ ಮಹರ್ಷಿ ವಾಲ್ಮೀಕಿ. ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ವಾಲ್ಮೀಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ ಎಂದರು.

ಇದೆ ಸಂದರ್ಭದಲ್ಲಿ ಸತ್ಯನಾರಾಯಣ ಮಾಳಾ, ಆದಿತ್ಯ ಲಾತೂರೆ, ಶೌರ್ಯ ಜವಾದಿ, ಬಸವರಾಜ ಪಂಗರಗಿ, ರಾಕೇಶ ಗುಡ್ಡಾ, ಚನ್ನವೀರ ಲಾತೂರೆ, ಶ್ರಾವ್ಯ ಜವಾದಿ, ರವಿ ಲಿಂಗಣ್ಣಿ, ಬಸವರಾಜ ಕಲ್ಲೂರ, ಅರವಿಂದ ಪಂಚಾಳ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!